ನಟಿ ಮತ್ತು ರಾಜ್ಯ ಬಿಜೆಪಿ ಮಹಿಳಾ ನಾಯಕಿ ಖುಷ್ಬು ಸುಂದರ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ತಮ್ಮ ತೂಕವನ್ನ ಗಮನಾರ್ಹವಾಗಿ ಕಡಿಮೆ ಮಾಡಿಕೊಂಡ ನಂತರ ನಟಿ ಖುಷ್ಬು ಪದೇ ಪದೇ ಅನಾರೋಗಕ್ಕೆ ತುತ್ತಾಗುತ್ತಿದ್ದಾರೆ.
ಮಂಗಳವಾರ ಚೆನ್ನೈ ನಗರದಲ್ಲಿ ನಡೆದ ತಮ್ಮ ಸಹೋದರ ಅಬ್ದುಲ್ಲಾ ನಟನೆಯ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಖುಷ್ಬು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಆದರೇ ಆಕೆ ಸಂಜೆ ವೇಳೆಗೆ ಅಸ್ವಸ್ಥಳಾಗಿ ನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನ ನಟಿ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದು, ಬೆನ್ನುನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಒಂದೆರೆಡು ದಿನದಲ್ಲಿ ಮತ್ತೆ ದೈನಂದಿನ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ’’ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಖುಷ್ಬು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಖುಷ್ಬು ಟ್ವೀಟ್ ನೋಡಿದ ಅಭಿಮಾನಿಗಳು ‘ಏನಾಯ್ತು.. ಬೇಗ ಗುಣಮುಖರಾಗಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ.. ರಾಜ್ಯಪಾಲರಾದ, ತಮಿಳ್ ಸಾಯಿ, ಮೀನಾ, ರಾಧಾ, ಎಲ್ಲರೂ ಟ್ವಿಟ ಮಾಡಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಖುಷ್ಬು ಸುಂದರ್ ಪ್ರತಿ ಟ್ವೀಟ್‌ಗೆ ‘ಧನ್ಯವಾದಗಳು’ ಎಂದು ಉತ್ತರಿಸಿದ್ದಾರೆ. ಇದೀಗ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.