ಕನ್ನಡದ ಹಿರಿಯ ನಟ ಲೋಹಿತಾಶ್ವ (Lohitashwa)ರಿಗೆ ಹೃದಯಾಘಾತ
ಕನ್ನಡ ಸಿನಿಮಾರಂಗದ ಹಿರಿಯ ನಟರಾದ ಲೋಹಿತಾಶ್ವ ಅವರಿಗೆ ಹೃದಯಾಘಾತವಾಗಿದೆ… ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ಅಕ್ಟೋಬರ್ 9ರ ರಾತ್ರಿ ಹೃದಯಾಘಾತವಾ ಸಂಭವಿಸಿದೆ.. ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಪೋಲೊ ಆಸ್ಪತ್ರೆಗೆ ಅವರನ್ನ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ..
ಲೋಹಿತಾಶ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕನ್ನಡದಲ್ಲಿ ನಟ ಲೋಹಿತಾಶ್ವ ಅವರು ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಖಳನಾಯಕನಾಗಿ , ಪೋಷಕ ನಟನಾಗಿ ಮಿಂಚಿದ್ದಾರೆ.. ಅಲ್ಲದೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಸುಮಾರು ನಾಟಕಗಳನ್ನೂ ನಿರ್ದೇಶಿಸಿದ್ದಾರೆ..