ಪೊನ್ನಿಯಿನ್ ಸೆಲ್ವನ್ ರಜನಿಕಾಂತ್ ಅವರ 2.0 ಅನ್ನು ಹಿಂದಿಕ್ಕಿ US ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿ ಹೊರಹೊಮ್ಮಿದೆ..
ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ರಜನಿಕಾಂತ್ ಅವರ 2.0 ಅನ್ನು ಹಿಂದಿಕ್ಕಿ US ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾವಾಗಿದೆ..
ಚಿಯಾನ್ ವಿಕ್ರಮ್ ಅಭಿನಯದ ಪೊನ್ನಿಯಿನ್ ಸೆಲ್ವನ್ ಚಿತ್ರವು ಸೆಪ್ಟೆಂಬರ್ 30 ರಂದು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದೆ.. ಅಭಿಮಾನಿಗಳು ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ..
ನೆಗೆಟಿವ್ ರಿವ್ಯೂಗಳನ್ನೂ ಕೂಡ ಪಡೆದ್ರೂ ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿದೆ.. ಅಲ್ಲದೇ 2018 ರಲ್ಲಿ ಬಿಡುಗಡೆಯಾದ ಶಂಕರ್ ನಿರ್ದೇಶನದ ರಜನಿಕಾಂತ್ ನಟನೆಯ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾ 2.0 ಅನ್ನು ಯುಎಸ್ ನಲ್ಲಿ ಹಿಂದಿಕ್ಕಿದೆ.. ಮಣಿರತ್ನಂ ಅವರ ಅದ್ಭುತ ಕೃತಿಯು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ತಮಿಳು ಚಲನಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ ಒಂದು ಅವಧಿಯ ನಾಟಕವಾಗಿದ್ದು, ಕ್ರಮವಾಗಿ ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ರತ್ನಂ ಮತ್ತು ಅಲ್ಲಿರಾಜ ಸುಭಾಸ್ಕರನ್ ನಿರ್ಮಿಸಿದ್ದಾರೆ.