Amithab Bachchan : 80 ನೇ ವಸಂತಕ್ಕೆ ಕಾಲಿಟ್ಟ ಬಿಗ್ ಬಿಗೆ ಶುಭಾಷಯಗಳ ಮಹಾಪೂರ..!!
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಇಂದು ಜನ್ಮ ದಿನದ ಸಂಭ್ರಮ… ಭಾರತೀಯ ಸಿನಿಮಾರಂಗದ ದಿಗ್ಗಜ ನಟ ಅಮಿತ್ ಬಚ್ಚನ್ ಅವರು ಇದೀಗ 80 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ..
Social Media ದಲ್ಲಿ ಎಲ್ಲಾ ಭಾಷೆಯ ತಾರೆಯರೂ , ಅಭಿಮಾನಿಗಳು ಕೂಡ ಅಮಿತಾಬ್ ಬಚ್ಚನ್ ಅವರಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ದಶಕಗಳಿಂದ ಸಿನಿಮಾರಂಗದಲ್ಲಿ ಅಮಿತಾಬ್ ಬಚ್ಚನ್ ಸಕ್ರಿಯರಾಗಿದ್ದಾರೆ.. ಈಗಲೂ 80 ರ ವಯಸ್ಸಿನಲ್ಲೂ ಬಣ್ಣದ ಜಗತ್ತಿನಲ್ಲಿ ಸಕ್ರಿಯವಾಗಿರುವ ಅಮಿತಾಬ್ ಬಚ್ಚನ್ ಅವರು ಜಾಹೀರಾತುಗಳಲ್ಲಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ..
ಮುಖ್ಯವಾಗಿ ಅವರು ನಡೆಸಿಕೊಡ್ತಿರುವ ಕೌನ್ ಬನೇಗಾ ಕರೋಡ್ ಪತಿ ಇಡೀ ಭಾರತ ಅಷ್ಟೇ ಅಲ್ದೇ ವಿದೇಶಗಳಲ್ಲೂ ಜನಪ್ರಿಯ.. ಇಡೀ ಭಾರತದ ನೆಚ್ಚಿನ ಶೋ.. ಯಶಸ್ವಿ 13 ಸೀಸನ್ ಗಳನ್ನ ಮುಗಿಸಿ 14 ನೇ ಸೀಸನ್ ನಡೆಯುತ್ತಿದೆ..
ಇತ್ತೀಚೆಗೆ ಅಕ್ಟೋಬರ್ 7 ರಂದು ಬಿಗ್ ಬಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದೆಯಾದ್ರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಡಲ್ ಆಗಿದೆ..
ಅಂದ್ಹಾಗೆ ಈ ಸಂದರ್ಭದಲ್ಲಿ 1970 ರ ವೇಳೆ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಅವರ ಹಳೆಯ ಸೂಪರ್ ಹಿಟ್ ಸಿನಿಮಾಗಳನ್ನ ರೀ ರಿಲೀಸ್ ಮಾಡುತ್ತಿದೆ.. ಅಮಿತಾಬ್ ಬಚ್ಚನ್ ಅವರ 11 ಸಿನಿಮಾಗಳು 17 PVR ಗಳಲ್ಲಿ ರೀ ರಿಲೀಸ್ ಆಗಲಿದೆ..