ದೀಪಾವಳಿಯಲ್ಲಿ ಹರ ಹರ ಮಹದೇವ , ರಾಮ್ ಸೇತು , ಥ್ಯಾಂಕ್ ಗಾಡ್ ನಡುವೆ ಬಾಕ್ಸ್ ಆಫೀಸ್ ಘರ್ಷಣೆ ನಡೆಯಲಿದೆ.
ಈ ವರ್ಷದ ದೀಪಾವಳಿ ಹಬ್ಬದ ಸೀಸನ್ ನಲ್ಲಿ 3 ಬಹುನಿರೀಕ್ಷತ ಬಾಲಿವುಡ್ ಸಿನಿಮಾಗಳ ನಡುವೆ ಭಾರೀ ಫೈಟ್ ನಡೆಯಲಿದೆ..
ಅಕ್ಟೋಬರ್ 25 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ..
ಹರ ಹರ ಮಹಾದೇವ್, ರಾಮ ಸೇತು ಮತ್ತು ಥ್ಯಾಂಕ್ ಗಾಡ್ ಸಿನಿಮಾಗಳು ರಿಲೀಸ್ ಆಗುತ್ತಿದೆ. ಪ್ರತಿಯೊಂದು ಚಲನಚಿತ್ರವು ವಿಭಿನ್ನ ಕಥೆಯನ್ನ ಹೊಂದಿದೆ..
ಮರಾಠಿಯ ಮೊದಲನೇ ಪ್ಯಾನ್ ಇಂಡಿಯಾ ಸಿನಿಮಾ ಹರ ಹರ ಮಹಾದೇವ ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ZEE ಸ್ಟುಡಿಯೋಸ್ ನಿರ್ಮಿಸಿದೆ.. ಅಭಿಜಿತ್ ದೇಶಪಾಂಡೆ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುಬೋಧ್ ಭಾವೆ, ಶರದ್ ಕೇಲ್ಕರ್, ಸಾಯಿಲಿ ಸಂಜೀವ್ ಮತ್ತು ಅಮೃತಾ ಖಾನ್ವಿಲ್ಕರ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಮಹಾನ್ ಮರಾಠ ಯೋಧ ಬಾಜಿ ಪ್ರಭು ನೇತೃತ್ವದ ನೈಜ ಯುದ್ಧದ ಸ್ಪೂರ್ತಿದಾಯಕ ಕಥೆಯನ್ನು ಚಲನಚಿತ್ರವು ಪ್ರಸ್ತುತಪಡಿಸುತ್ತದೆ. 300 ಸೈನಿಕರು 12,000 ಶತ್ರು ಸೈನಿಕರ ಸೈನ್ಯದೊಂದಿಗೆ ಹೋರಾಡಿ ವಿಜಯವನ್ನು ಖಾತ್ರಿಪಡಿಸಿದ ಐತಿಹಾಸಿಕ ಮುಖಾಮುಖಿ, ಆದರೂ ಅದ್ಭುತವಾದ ಗೆಲುವನ್ನು ತಮ್ಮ ಪ್ರಾಣದ ಪರಮ ತ್ಯಾಗದಿಂದ ಪಾವತಿಸಿದ ಕಥೆಯಿದೆ..
ರಾಮ್ ಸೇತು ಮುಂಬರುವ ಹಿಂದಿ ಸಾಹಸ ಚಿತ್ರವಾಗಿದ್ದು, ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ ಭರುಚ್ಚಾ, ಸತ್ಯ ದೇವ್ ಮತ್ತು ನಾಸರ್ ಅವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.. ಥ್ಯಾಂಕ್ ಗಾಡ್ ಮುಂಬರುವ ಹಿಂದಿ ಫ್ಯಾಂಟಸಿ ಹಾಸ್ಯ ಚಿತ್ರವಾಗಿದ್ದು, ಇದರಲ್ಲಿ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಕುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಘರ್ಷಣೆಗೊಳ್ಳುತ್ತವೆ…