Kantara-ಓ ಟಿ ಟಿ ಗೆ ಬರಲಿದ್ಯಾ ಡಿವೈನ್ ಬ್ಲಾಕ್ ಬಾಸ್ಟರ್ ಕಾಂತಾರ..!!
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು , ಭರ್ಜರಿ ಕಮಾಯಿ ಮಾಡ್ತಿದೆ.. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಕಾಂತಾರ ಸಿನಿಮಾವನ್ನ ಮತ್ತೆ ಮತ್ತೆ ನೋಡಬೇಕೆಂಬ ಗಿತವನ್ನ ಜನರು ವ್ಯಕ್ತಪಡಿಸುತ್ತಿದ್ದಾರೆ.. ಇನ್ನೂ ಹಲವರು ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ ಅಂತ ಕಾತರದಿಂದ ಕಾಯುತ್ತಿದ್ದಾರೆ..
ಆದ್ರೆ ಕಾಂತಾರದ ಕ್ರೇಜ್ , ಅದರ ಆರ್ಭಟ ನೋಡಿದ್ರೆ ಇನ್ನೊಂದೆರೆಡು ತಿಂಗಳು ಒಟಿಟಿಗೆ ಬರೋದು ಡೌಟ್..!
ಅದ್ರಲ್ಲೂ ಸಿನಿಮಾ ಈಗ ಲ್ ಓವರ್ ಇಂಡಿಯಾ ಮಲಯಾಳಂ , ತೆಲುಗು , ತಮಿಳು ಹಿಂದಿ ಭಾಷೆಗಳಲ್ಲೂ ಡಬ್ಬಿಂಗ್ ಆಗಿ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಲಿದೆ.. ಈ ನಡುವೆ ಸಿನಿಮಾ ಮರಾಠಿ ಹಾಗೂ ಗುಜರಾತಿ ಭಾಷೆಗಳಿಗೂ ಡಬ್ ಆಗಲಿದೆ ಎಂಬ ವದಂತಿಗಳು ಇದೆ..
ಹೀಗೆ ಒಂದು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿರುವ ಡಿವೈನ್ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾ ಕಾಂತಾರ ಶೀಘ್ರದಲ್ಲೇ ಒಟಿಟಿಗೆ ಬರೋದು ಅನುಮಾನವೇ ಆದ್ರು ಮೂಲಗಳ ಪ್ರಕಾರ ಮುಂದಿನ ತಿಂಗಳು ಒಟಿಟಿಯಲ್ಲಿ ಲಭ್ಯವಿರಲಿದೆ ಎನ್ನಲಾಗ್ತಿದೆ..