Chello Show : Child Actor Rahul Koli Of Chello Show no more..
RRR ಹಾಗೂ The Kashmir Files ಸಿನಿಮಾಗೆ ಸೆಡ್ಡು ಹೊಡೆದು ಆಸ್ಕರ್ಸ್ ( Oscars 2022) ಗೆ ನಾಮಿನೇಟ್ ಆಗಿರುವ ಗುಜರಾತಿ ಸಿನಿಮಾ ( Film) ಚೆಲ್ಲೋ ಶೋನಲ್ಲಿ ( the Chello Show) ನಟಿಸಿರುವ ಬಾಲ ನಟ ರಾಹುಲ್ ಕೋಲಿ ನಿಧರಾಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಆಘಾತ ….
ರಾಹುಲ್ ಕೋಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.. ಇವರ ತಂದೆ ರಾಮು ಕೋಲಿ ಆಟೋ ಡ್ರೈವರ್.. ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು.. ಆಧ್ರೆ ಅಷ್ಟರಲ್ಲೇ ರಾಹುಲ್ ಇಹಲೋಕ ತ್ಯಜಿಸಿದ್ದು , ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಲಾಗ್ತಿದೆ..
“ಅಕ್ಟೋಬರ್ 2 ರ ಭಾನುವಾರದಂದು, ರಾಹುಲ್ ಕೋಲಿ ( Rahul koli ) ಉಪಹಾರ ಸೇವಿಸಿದ್ದರು.. ನಂತರ ಪದೇ ಪದೇ ಜ್ವರ ಕಾಣಿಸಿಕೊಂಡಿತ್ತು.. ಬಳಿಕ ರಾಹುಲ್ ಮೂರು ಬಾರಿ ರಕ್ತ ವಾಂತಿ ಮಾಡಿದ್ದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಇಹಲೋಕ ತ್ಯಜಿಸಿದ್ದಾಗಿ ರಾಹುಲ್ ತಂದೆ ಹೇಳಿದ್ದು , ನಮ್ಮ ಕುಟುಂಬದ ಖುಷಿ ಹಾಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ..
ನಾವು ರಾಹುಲ್ ನಟಿಸಿರುವ ಚೆಲ್ಲೋ ಶೋ ಸಿನಿಮಾವನ್ನ ಅಕ್ಟೋಬರ್ 14 ರಂದು ಬಿಡುಗಡೆಯ ದಿನದಂದು ನೋಡುತ್ತೇವೆ” ಎಂದು ಅವರ ತಂದೆ ರಾಮು ಕೋಲಿ ಹೇಳಿದ್ದಾರೆ..