BBK9 : ಬಿಗ್ ಬಾಸ್ ಸಾಕು ಮನೆಗೆ ಹೋಗ್ಬೇಕು ಎಂದ ಗುರೂಜಿ..!!
BiggBoss Kannada 9 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. ಅದ್ರಲ್ಲೂ ಒಟಿಟಿಯಂತೆ ಆರ್ಯವರ್ಧನ್ ಗುರೂಜಿ ಅವರು ಈ ಸೀಸನ್ ನಲ್ಲೂ ಮಿಂಚುತ್ತಿದ್ದಾರೆ.. ಮೂರನೇ ವಾರದ ಕ್ಯಾಪ್ಟನ್ ಆಗಿದ್ದಾರೆ ಆರ್ಯವರ್ಧನ್ ಗುರೂಜಿ..
ಆದ್ರೀಗ ಅದ್ಯಾಕೋ ಗುರೂಜಿಗೆ ಬಿಗ್ ಬಾಸ್ ಮನೆ ಸಾಕಾಗಿದೆ ಎಂಬಂತೆ ತೋರುತ್ತಿದೆ.. ಮನೆಯಿಂದ ಹೊರ ಹೋಗುವ ಬಗ್ಗೆ ಮಾತನಾಡ್ತಿದ್ದಾರೆ.. ಬಿಗ್ ಬಾಸ್ ಅವರಿಗೆ ಸಾಕಾಗಿದ್ದು, ತಮ್ಮ ಮನೆಕಡೆ ಹೋಗಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ರೂಪೇಶ್ ಬಳಿ ಹೇಳಿಕೊಂಡಿದ್ದಾರೆ..
ಈಗ ಮೂರನೇ ವಾರದತ್ತ ಮುನ್ನುಗ್ಗುತ್ತಿರುವ ದೊಡ್ಮನೆಯಲ್ಲಿ ಗುರೂಜಿ ಅವರು ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಹಾಗಾಗಿ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಳ್ಳುವಂತಿರಲಿಲ್ಲ.
ಈ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದರ್ಶ್ ಚಂದ್ರಪ್ಪ, ದಿವ್ಯಾ ಉರುಡುಗ, ಮಯೂರಿ, ಗೊಬ್ಬರಗಾಲ, ದೀಪಿಕಾ, ರೂಪೇಶ್ ಶೆಟ್ಟಿ, ಅಮೂಲ್ಯ ಹಾಗೂ ಅನುಪಮಾ ಅವರು ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ. ಆದ್ರೆ ಗುರೂಜಿಗೆ ಮನೆಗೆ ಹೋಗುವ ಮನಸ್ಸಾಗಿದೆ..
ಈ ವಾರ ನನ್ನನ್ನು ಕಳಿಸಿಕೊಡಿ ಅಂತ ಕೇಳ್ತೀನಿ ಎಂದು ಗುರೂಜಿ, ರೂಪೇಶ್ ಬಳಿ ಹೇಳಿಕೊಂಡಿದ್ದಾರೆ. ಆರಾಮಾಗಿ ಇದೀರಲ್ಲ. ಮತ್ಯಾಕೆ ಹೋಗೋ ಚಿಂತೆ ನಿಮಗೆ ಈಗ ಮನೆಯಿಂದ ಔಟ್ ಆದ್ರೆ ಮತ್ತೆ ನೀವು ಬರೋಕೆ ಆಗಲ್ಲ ಎಂದು ರೂಪೇಶ್ ಹೇಳ್ತಾರೆ. ಆಯ್ಕೆ ಇದ್ರೆ ಕಳಿಸಿಕೊಡಿ ಎಂದು ಕೇಳ್ತಿನಿ.
ಹಾಗೆ ಆಯ್ಕೆ ಇಲ್ಲ ಅಂದ್ರೆ ಇಲ್ಲೇ ಮುಂದುವರಿಯುತ್ತೀನಿ.. ನಾನು ಮನೆಯಿಂದ ಹೊರಹೋಗಬೇಕು. ಇಲ್ಲಿಗೆ ಬಂದು ಏನು ಆಗಬೇಕಿಲ್ಲ. 10 ವಾರ ಇದ್ರೂ ನನ್ನ ವ್ಯಕ್ತಿತ್ವ ಇರೋದು ಹೀಗೆ. ಇಷ್ಟು ದಿನ ಇದ್ದಿದ್ದು ಖುಷಿ ನೀಡಿದೆ ಎಂದಿದ್ದಾರೆ ಗುರೂಜಿ.
ಒಟ್ಟಾರೆ ಒಮ್ಮೆ ಕ್ಯಾಪ್ಟನ್ ಆಗಲೇಬೇಕೆಂಬ ಆಸೆ ಹೊಂದಿದ್ದ ಗುರೂಜಿ ಈಗ ತಮ್ಮ ಸೆ ಈಡೇರಿಸಿಕೊಂಡಿದ್ದಾರೆ.. ಇದರ ಬೆನ್ನಲ್ಲೇ ಮನೆಗೆ ಹೋಗುವ ಮನಸ್ಸು ಮಾಡಿ ಅಚ್ಚರಿ ಮೂಡಿಸಿದ್ದಾರೆ..