Nayanatara : ಬಾಡಿಗೆ ತಾಯ್ತನ – ದಂಪತಿಗೆ 5 ವರ್ಷ ಜೈಲು ಶಿಕ್ಷೆ ಸಾಧ್ಯತೆ..??
ಮದುವೆಯಾಗಿ 4 ತಿಂಗಳಿಗೆ ತಾವು ತಂದೆತಾಯಿಯಾಗುತ್ತಿರುವುದಾಗಿ ಘೋಚಿಸಿದ್ದ ಕಾಲಿವುಡ್ ನ ಸ್ಟಾರ್ ಜೋಡಿ ನಯನತಾರಾ ಹಾಗೂ ವಿಘ್ನೇಶ್ ಸಖತ್ ಟ್ರೋಲ್ ಆಗ್ತಿದ್ದಾರೆ..
ಅವರು ಸೆರೊಗೆಸಿ ಮೂಲಕ ಮಕ್ಕಳನ್ನ ಪಡೆದಿದ್ದಾರೆ ಎನ್ನಲಾಗಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರದ್ದೇ ಸುದ್ದಿ ಚರ್ಚೆಯಲ್ಲಿದೆ..
ಈ ನಡುವೆ ಇದೀಗ ವಿಘ್ನೇಶ್ ಹಾಗೂ ನಯನತಾರಾಗೆ ಕಾನೂನಿನ ಸಂಕಷ್ಟ ಎದುರಾಗಿದೆ..
ಈ ಬಗ್ಗೆ ತನಿಖೆಗೆ ತಮಿಳು ನಾಡಿನ ಸರ್ಕಾರ ಆದೇಶ ಹೊರಡಿಸಿದೆ..
ಅಕ್ಟೋಬರ್ 10 ರಂದು ಅವಳಿ ಜವಳಿ ಗಂಡುಮಕ್ಕಳಿಗೆ ತಂದೆ ತಾಯಿಯಾಗಿದ್ದೇವೆ ಎಂದು ಮಕ್ಕಳ ಪಾದಗಳಿಗೆ ಮುತ್ತಿಡುತ್ತಿರುವ ಫೋಟೋವನ್ನ ವಿಘ್ನೇಶ್ ಹಂಚಿಕೊಂಡಿದ್ದರು.. ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರಿಟ್ಟ ಬಗ್ಗೆಯೂ ದಂಪತಿ ಮಾಹಿತಿ ಹಂಚಿಕೊಂಡಿದ್ದರು..
ಆಗಿನಿಂದ ಅಭಿಮಾನಿಗಳು ಶುಭ ಹಾರೈಸಿದ್ದರೆ ಇನ್ನೂ ಹಲವರು ಟ್ರೋಲ್ ಮಾಡಿದ್ದರು.
ಈಗ ಇದೇ ವಿಚಾರದ ತನಿಖೆಗೆ ಸರ್ಕಾರ ಆದೇಶ ನೀಡಿದ್ದು , ಬಾಡಿಗೆ ತಾಯ್ತನದ ಮೂಲಕ ಮಗು ಪಡೆದದ್ದು ನಿಯಮಗಳ ಪ್ರಕಾರವೇ ಇದೆಯಾ ಎಂದು ಕೇಳಿದೆ.
ಬಾಡಿಗೆ ತಾಯ್ತನದ ಕುರಿತು ಸರ್ಕಾರ ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಪಾಲಿಸಿಲ್ಲ ನ್ನಲಾಗ್ತಿದೆ… ಹೀಗಾಗಿ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗುತ್ತಿದೆ..
ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.
ಆದರೆ, ನಯನ ದಂಪತಿ ಈ ನಿಯಮಗಳನ್ನ ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ.
ಒಂದೊಮ್ಮೆ ಸೆರೊಗೆಸಿ ನಿಯಮಗಳನ್ನ ಪಾಲಿಸದೇ ಮಕ್ಕಳನ್ನ ಪಡೆದಿದ್ದು ಸಾಬೀತಾದಲ್ಲಿ ದಂಪತಿಗೆ 5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ..
ಸದ್ಯ ಇಷ್ಟೆಲ್ಲಾ ಸುದ್ದಿಯಾದ್ರೂ ನಯನತಾರ ಮತ್ತೆ ವಿಘ್ನೇಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..