ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಒಂದು ವಿವಾದ ಮತ್ತು ಟ್ರೋಲ್ ಗೆ ಗುರಿಯಾಗುತ್ತಿದೆ. ಪ್ರಭಾಸ್, ಸೈಫ್ ಅಲಿ ಖಾನ್ ಸೇರಿದಂತೆ ಐವರ ವಿರುದ್ಧ ದೆಹಲಿಯ ಜೌನ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಅಕ್ಟೋಬರ್ 2 ರಂದು ಅನಾವರಣಗೊಂಡ ಚಿತ್ರದ ಟೀಸರ್ನಲ್ಲಿ ರಾಮ, ಸೀತೆ, ಹನುಮಾನ್, ರಾವಣರನ್ನ ಅಸಭ್ಯವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ವಕೀಲ ಹಿಮಾಂಶು ಶ್ರೀವಾಸ್ತವ ಅವರ ದೂರಿನ ಮೇರೆಗೆ ಜೌನ್ಪುರದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶುತೋಷ್ ಸಿಂಗ್ ಅವರು ಚಿತ್ರದ ನಿರ್ದೇಶಕ ಓಂ ರಾವುತ್, ನಟರಾದ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರ ಹೇಳಿಕೆಯನ್ನು ಅಕ್ಟೋಬರ್ 27ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ಚಿತ್ರದ ಟೀಸರ್ನಲ್ಲಿ ಭಗವಾನ್ ರಾಮ, ಸೀತೆ, ಹನುಮಂತ ಮತ್ತು ರಾವಣನ ಅಸಭ್ಯವಾಗಿ ಚಿತ್ರಿಸಲಾಗಿದೆ, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಶ್ರೀವಾಸ್ತವ್ ಆರೋಪಿಸಿದ್ದಾರೆ.
ಆದಿಪುರುಷ ರಾಮಾಯಣವನ್ನ ಆಧರಿಸಿದ ಚಲನಚಿತ್ರವಾಗಿದೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ ಸುಮಾರು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್ನಲ್ಲಿ ನಿರ್ಮಿಸಲಾದ ಆದಿಪುರುಷ ಚಿತ್ರವನ್ನ ಜನವರಿ 12, 2023 ರಂದು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.