BBK9: BiggBoss ಕನ್ನಡ ಸೀಸನ್ 9 ಮೂರನೇವಾರ ನಡೆಯುತ್ತಿದ್ದು , ಸಾಕಷ್ಟು ರೋಚಕತೆಯಿಂದ ಕೂಡಿದೆ.. ದಿನೇ ದಿನೇ ಕಂಟೆಸ್ಟೆಂಟ್ ಗಳ ನಡುವೆ ಗಲಾಟೆಯೂ ತಾರಕಕ್ಕೇರುತ್ತಿದೆ… ಮನೆಯಲ್ಲಿ ಇಬ್ಬರು ಹೋರಾಟಗಾರರು ಇದ್ದಾರೆ.. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಸಾಮಜಿಕ ಚಿಂತಕ ಪ್ರಶಾಂತ್ ಸಂಬರ್ಗಿ..
ಸಂಬರ್ಗಿ ಸೀಸನ್ 8 ರಲ್ಲೂ ಅತಿ ಹೆಚ್ಚು ಕಿರಿಕ್ ಮಾಡಿಕೊಂಡೇ ಹೈಲೇಟ್ ಆಗಿ ಫೈನಲ್ಸ್ ವರೆಗೂ ತಲುಪಿದ್ದರು.. ಈ ಬಾರಿಯೂ ಬಿಗ್ ಬಾಸ್ ನಲ್ಲಿ ಸಂಬರ್ಗಿ ಹೈಲೇಟ್ ಆಗ್ತಿದ್ದಾರೆ.. ಆಗಾಗ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ನಡುವೆ ಕಿರಿಕ್ ಆಗುತ್ಲೇ ಇರುತ್ತೆ..
ಇಬ್ಬರ ಜಗಳ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು , ವಯಕ್ತಿಕ ವಿಚಾರಗಳನ್ನ ಎಳೆತಂದು ಜಗಳವಾಡುತ್ತಿದ್ದಾರೆ. ಕ್ಯಾಪ್ಟೆನ್ಸಿಗಾಗಿ ನಡೆದ ‘ಬಿಗ್ ಬಾಸ್ ಗೋಲ್ಡ್ ಮೈನ್’ ಟಾಸ್ಕ್ ನಲ್ಲಿ ಈ ಇಬ್ಬರ ನಡುವೆ ಮಾತಿನ ಫೈಟ್ ನಡೆದಿದೆ..
ಈ ಟಾಸ್ಕ್ ನಲ್ಲಿ ನಿಧಿ ಶೋಧಕರು ಚಿನ್ನವನ್ನು ಹುಡುಕಿ, ಅದನ್ನು ವಿಸರ್ಜಕರ ಬಳಿ ವಿನಿಯೋಗಿಸಿ, ಎದುರಾಳಿಯನ್ನು ಕ್ಯಾಪ್ಟೆನ್ಸಿ ಟಾಸ್ಕ್ ನಿಂದ ಹೊರಗಿಡಬೇಕು. ಮೊದಲ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ರೂಪೇಶ್ ರಾಜಣ್ಣ, ಟಾಸ್ಕ್ ಅನುಸಾರ ಪ್ರಶಾಂತ್ ಸಂಬರ್ಗಿಯನ್ನು ಔಟ್ ಮಾಡಿದರು. ಎರಡನೇ ಸುತ್ತಿನಲ್ಲಿ ವಿನೋದ್ ಗೊಬ್ಬರಗಾಲ ಜೊತೆ ಪ್ರಶಾಂತ್ ಸಂಬರ್ಗಿ ಮಾತನಾಡಿಕೊಂಡು ರೂಪೇಶ್ ರಾಜಣ್ಣನನ್ನು ಹೊರ ಹಾಕಿದರು.
ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯಿತು.. ಕುತಂತ್ರಿ ಬುದ್ದಿಯಿಂದ ನನ್ನನ್ನು ಔಟ್ ಮಾಡಿದರು ಎಂದು ರೂಪೇಶ್ ರಾಜಣ್ಣ ಕಿರುಚಾಡಿದಾಗ ಅವರನ್ನು ಸಂಬರ್ಗಿ ಹೇಡಿ, ರಾಜಾ ಇಲಿ ಎಂದೆಲ್ಲ ವ್ಯಂಗ್ಯವಾಡ್ತಾರೆ.
ಇಬ್ಬರ ನಡುವೆ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತದೆ. ನಾಲಿಗೆ ಹರಿಬಿಟ್ಟ ಸಂಬರ್ಗಿ , ಡಬ್ಬಾ ನನ್ ಮಗ, ಹೆದರುಪುಕಲ ರೂಪೇಶ್ ರಾಜಣ್ಣ, ಯಾರ‍್ಯಾರ ಬಳಿ ರೋಲ್ ಮಾಡಿದ್ದಾರೋ ಏನೋ, ಕನ್ನಡದ ಕಂದ ಹೇಡಿ ಅಂತೆಲ್ಲ ಹೀಯಾಳಿಸುತ್ತಾರೆ..
ಇದ್ರಿಂದ ಸಿಟ್ಟಿಗೆದ್ದ ರೂಪೇಶ್ ರಾಜಣ್ಣ ನಾನೇನಾದರೂ ರೋಲ್‌ಕಾಲ್ ಮಾಡಿದ್ದರೆ, ಯಾರಿಂದಾದರೂ ನಯಾಪೈಸೆ ಪಡೆದಿದ್ದರೆ, ಅದನ್ನು ಸಂಬರ್ಗಿ ಸಾಬೀತು ಪಡಿಸಲಿ. ನಾನು ರೋಲ್ ಕಾಲ್ ಮಾಡಿದ್ದೇನೆ ಅಂತ ಪ್ರೂವ್ ಮಾಡಿದರೆ ಹ್ಯಾಂಗ್ ಮಾಡಿಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ. ಅಲ್ಲದೇ ಸಂಬರ್ಗಿ ಮೇಲೆಯೇ ಪರೋಕ್ಷ ರೋಪವನ್ನೂ ಮಾಡಿರುವ ರೂಪೇಶ್ ರಾಜಣ್ಣ ಹೊರಗಡೆ ಕೋಟಿ ಕೋಟಿ ವ್ಯವಹಾರ ಮಾಡೋ ಕುತಂತ್ರಿಗಳು ನಾವಲ್ಲ ಎಂದಿದ್ದಾರೆ..