ಮೋಹನ್ ರಾಜಾ ನಿರ್ದೇಶನದಲ್ಲಿ ದಸರಾಗೆ ರಿಲೀಸ್ ಆದ ಗಾಡ್ ಫಾದರ್ ಸಿನಿಮಾ ಸೂಪರ್ ಹಿಟ್ ಆಗಿದೆ.
ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಕಾಣಿಸಿಕೊಂಡಿದ್ದಾರೆ.
ಆದ್ರೆ ಸಕ್ಸಸ್ ಮೀಟ್ ನಲ್ಲಿ ಪೂರಿ ಮಿಸ್ ಆಗಿದ್ದರು. ಇದರೊಂದಿಗೆ ಪುರಿಗೆ ಏನಾಯ್ತು ?
ಸಕ್ಸಸ್ ಮೀಟ್ ಗೆ ಯಾಕೆ ಬಂದಿಲ್ಲ ? ಅನ್ನೋದು ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ.
ಆದ್ರೆ ಮೂಲಗಳ ಪ್ರಕಾರ ಸಕ್ಸಸ್ ಮೀಟ್ ಗೆ ಸ್ವತಃ ಚಿರಜೀವಿ ಅವರೇ ಪೂರಿ ಅವರನ್ನು ಸ್ವಾಗತಿಸಿದ್ರೂ ಅವರು ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಪೂರಿ ಪ್ರಸ್ತುತ ಗೋವಾದಲ್ಲಿ ಹೊಸ ಸಿನಿಮಾದ ಕೆಲಸದಲ್ಲಿದ್ದಾರಂತೆ.
ಲೈಗರ್ ಸಿನಿಮಾ ಡಿಸಾಸ್ಟರ್ ಆದ ಕಾರಣ ಪೂರಿ ಎಲ್ಲೂ ಕಾಣಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
ಆದ್ರೆ ಪೂರಿ ಬಗ್ಗೆ ಗೊತ್ತಿರುವವರೇ ಬೇರೆಯದ್ದೇ ಮಾತುಗಳನ್ನಾಡುತ್ತಿದ್ದಾರೆ.
ಪೂರಿ ಇಂತಹ ಡಿಸಾಸ್ಟರ್ ಗಳಿಗೆ ಅಂಜಿ ಓಡಿ ಹೋಗುವನಲ್ಲ. ಆತ ಮುಂದಿನ ಸಿನಿಮಾದ ಕೆಲಸದಲ್ಲಿದ್ದಾರೆ ಎಂದಿದ್ದಾರೆ.