ಸ್ಯಾಂಡಲ್ ವುಡ್ ಮೂವರು RRR ಸ್ಟಾರ್ ಗಳು ಅಂದ್ರೆ ಅದು ರಕ್ಷಿತ್ ಶೆಟ್ಟಿ , ರಿಷಬ್ ಶೆಟ್ಟಿ , ರಾಜ್ ಬಿ ಶೆಟ್ಟಿ.. ಈ ಮೂವರ ನಡುವೆ ಆತ್ಮೀಯ ಗೆಳೆತನವೂ ಕೂಡ ಇದೆ.. ಪ್ರತಿಭಾನ್ವಿತ ನಟರ ಜೊತೆಗೆ ನಿರ್ದೇಶಕರೂ ಹೌದು..
ಗುರುಡಗಮನ ವೃಷಭ ವಾಹನ , ಚಾರ್ಲಿ , ಈಗ ಕಾಂತಾರ ಮೂವರ ಪ್ರತಿಭೆಗಳಿಗೆ ಸಾಕ್ಷಿ.. ಕಾಂತಾರ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ.. ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ..
ಅಂದ್ಹಾಗೆ ಪ್ರೀಮಿಯರ್ ಶೋ ವೀಕ್ಷಿಸಿದ್ದ ರಕ್ಷಿತ್ ಭಾವುಕರಾಗಿ ರಿಷಬ್ ರನ್ನ ಡಿಬಂದು ಅಪ್ಪಿಕೊಂಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು ಕೂಡ..
ಅಂದ್ಹಾಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿ ಹೆಸರನ್ನ ಕಾಂತಾರ ಹೀರೋ ರಿಷಬ್ ತಮ್ಮ ಮೊಬೈಲ್ ನಲ್ಲಿ ಏನಂತ ಸೇವ್ ಮಾಡಿಕೊಂಡಿದ್ದಾರೆ ಗೊತ್ತಾ..?? ಅಂದ್ಹಾಗೆ ಈ ಮೂವರಿಗೆ ಪ್ರಮೋದ್ ಶೆಟ್ಟಿ ಕೂಡ ಒಳ್ಳೆಯ ಸ್ನೇಹಿತರು.. ತಮ್ಮ ಗೆಳೆಯರ ಹೆಸರನ್ನು ತಾವು ಯಾವ ಹೆಸರಿನಿಂದ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿದ್ದೇವೆ ಎಂಬುದನ್ನ ರಿಷಬ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಗೆಳೆಯರ ಹಾಗೂ ಸ್ವತಃ ರಿಷಬ್ ಪತ್ನಿ ಪ್ರಗತಿಯ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂದ ಸಹ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಯ ಹೆಸರನ್ನು ಚಿಂಟು , ಪ್ರಮೋದ್ ಶೆಟ್ಟಿಯವರ ಹೆಸರನ್ನು ಪಮ್ , ಪತ್ನಿ ಪ್ರಗತಿಯ ಹೆಸರನ್ನು ಬಾಬು ಎಂದು ಸೇವ್ ಮಾಡಿಕೊಂಡಿರೋದಾಗಿ ಹೇಳಿದ್ದರು..
ಸದ್ಯಾ ಕಾಂತಾರ ಹವಾ..! ಜೋರಾಗಿದ್ದು ಅಕ್ಟೋಬರ್ 14 ಕ್ಕೆ ಹಿಂದಿಯಲ್ಲಿ , ಅಕ್ಟೋಬರ್ 15 ಕ್ಕೆ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು , ಮುಂದಿನ ದಿನಗಳಲ್ಲಿ ತಮಿಳು ಮಲಯಾಳಂ ಬಾಷೆಯಲ್ಲೂ ಡಬ್ ಆಗಿ ರಿಲೀಸ್ ಆಗಲಿದೆ.. ಈ ,ಮೂಲಕ ಮತ್ತೊಂದು ಕನ್ನಡದ ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಅಬ್ಬರಿಸಲಿದೆ..