Doctor G ಮತ್ತು Code Name: Tiranga ಚಿತ್ರಕ್ಕೆ ಕಾಂತಾರಾ ಕಾಂಪಿಟೇಷನ್..!!
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ನಂತರ ಕಾಂತಾರ ಚಿತ್ರ ಇದೀಗ ಬಾಲಿವುಡ್ ಗೆ ಲಗ್ಗೆ ಹಾಕಲು ಹೊರಟಿದೆ. ಇದೇ ಅಕ್ಟೋಬರ್ 14 ರಂದು ಕಾಂತಾರ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಾಲಿವುಡ್ ನಲ್ಲಿ ಕಾಂತಾರ ಚಿತ್ರದ ಎದುರಾಗಿ ಆಯುಷ್ಮಾನ್ ಖುರಾನಾ ಅವರ ‘ಡಾಕ್ಟರ್ ಜಿ’ ಮತ್ತು ಪರಿಣಿತಿ ಚೋಪ್ರಾ ಅವರ ಕೋಡ್ ನೇಮ್: ತಿರಂಗ ಚಿತ್ರಗಳು ಬಿಡುಗಡೆಯಾಗುತ್ತಿವೆ.
ಸೆಪ್ಟಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ 60 ಕೋಟಿ ಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ , ಚಿತ್ರಕ್ಕೆ ಸಾಕಷ್ಟು ಪ್ರಚಾರವಂತೂ ಸಿಕ್ಕಿದ್ದೂ ಬಾಲಿವುಡ್ ನಲ್ಲೂ ಯಾವ ರೀತಿ ಚಿತ್ರ ಕಮಾಯಿ ಮಾಡಲಿದೆ ಎನ್ನುವುದನ್ನ ಆನಂತರ ನೋಡಬೇಕಿದೆ. ಇನ್ನೂ ಈ ಶುಕ್ರವಾರ ಬಿಡಗಡೆಯಾಗುತ್ತಿರುವ ಡಾಕ್ಟರ್ ಜೀ ಮತ್ತು ಕೋಡ್ ನೇಮ್: ತಿರಂಗ ಚಿತ್ರಕ್ಕೆ ಕಾಂತಾರ ಬಲವಾದ ಪೈಪೋಟಿ ನೀಡಲಿದೆ.
ಹಿಂದಿ ಏರಿಯಾಗಳಲ್ಲಿ ಮಹಾರಾಷ್ಟ್ರ ವಿಭಾಗದಲ್ಲಿ ಚಿತ್ರಕ್ಕೆ ಉತ್ತಮ ಒಪನಿಂಗ ಸಿಗುವ ಸಾಧ್ಯತೆ ಇದೆ. ಕನ್ನಡದಲ್ಲಿಯೇ ಚಿತ್ರ ಮುಂಬೈ ನಗರಗಳಲ್ಲಿ ಉತ್ತಮ ವಿಕ್ಷಕರನ್ನ ಪಡೆದುಕೊಂಡಿದೆ ಇನ್ನು ಹಿಂದಿ ಅವತರಣಿಕೆ ಬಿಡುಗಡೆಯಾದ ನಂತರ ಚಿತ್ರಕ್ಕೆ ಮತ್ತೊಂದು ಮೈಲೇಜ್ ಸಿಗಲಿದೆ.