ಮೊಸರಲ್ಲಿ ಕಲ್ಲು ಹುಡುಕುವವರು ಎಲ್ಲಾದರಲ್ಲೂ ತಪ್ಪು ಹುಡುಕೋದು ಸಹಜ…
ಬಾಕ್ಸ್ ಆಫೀಸ್ ನಲ್ಲೀ ಅಬ್ಬರಿಸುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ಕ್ರೇಜ್ ಯಾವ ಪರಿಯಿದೆ ಗೊತ್ತೇ ಇದೆ.. ಇನ್ನೂ ಅನೇಕರು ಟಿಕೆಟ್ ಸಿಗದೇ ಪರದಾಡುತ್ತಿದ್ದಾರೆ..
ಸಿನಿಮಾ ಬಗ್ಗೆ ಎಲ್ಲರೂ ಒಳ್ಳೆಯ ರಿವ್ಯೂವ್ ಕೊಡುತ್ತಾ ಸಿನಿಮಾವನ್ನ ರಿಷಬ್ ನಟನೆಯನ್ನ ಹಾಡುಗಳು ಬಿಜಿಎಂ ಎಲ್ಲವನ್ನೂ ಕೊಂಡಾಡುತ್ತಿದ್ದಾರೆ..
ಈ ನಡುವೆ ‘ವರಹ ರೂಪಂ’ ಹಾಡಿನ ಟ್ಯೂನ್ ಮಲಯಾಳಂನ ನ ನವರಸಂ ಆಲ್ಬಂ ಹಾಡಿನಿಂದ ಕದ್ದಿರುವುದೆಂದು ಕೆಲ ನೆಟ್ಟಿಗರು ಸಾಕ್ಷಿ ಸಮೇತ ಆರೋಪಿಸುತ್ತಿದ್ದಾರೆ.. ಆದ್ರೆ ಇದು ಕದ್ದಿದ್ದಲ್ಲ.. ಹಾಡಿನಿಂದ ಇನ್ಸಿರೇಷನ್ ತೆಗೆದುಕೊಂಡಿರಬಹುದೇ ವಿನಃ ಕದ್ದದ್ದಲ್ಲ ಎಂದು ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಖಾಸಗಿ ವಾಹನಿಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ..
ಆದ್ರೆ ಇದರ ಬೆನ್ನಲ್ಲೇ ಸಿಂಗಾರ ಸೀರೆಯೇ ಹಾಡಿನ ಟ್ಯೂನ್ ಸಹ ಕದ್ದಿರುವುದೇ ಎಂದು ನೆಟ್ಟಿಗರು ಆರೋಪ ಹೊರಿಸಲು ಆರಂಭಿಸಿದ್ದು , ಇದಕ್ಕೆ ಅಜನೀಶ್ ಉತ್ತರ ಕೊಟ್ಟಿದ್ದಾರೆ..
ಹೌದು..! ಕೆಲವರು ಈ ಹಾಡಿನ ಮ್ಯೂಸಿಕ್ ಮರಾಠಿಯ ಅಪ್ಸರ ಆಲಿಯಿಂದ ಕದ್ದಿರುವುದು ಎಂದು ಹೇಳುತ್ತಿದ್ದಾರೆ.. 2010 ರಲ್ಲಿ ರಿಲೀಸ್ ಆಗಿದ್ದ ನಟರಂಗ್ ಸಿನಿಮಾದ ಅಪ್ಸರ ಆಲಿಯ ಟ್ಯೂನ್ ಗೂ ಸಿಂಗಾರ ಸೀರೆಯೇ ಹಾಡಿನ ಟ್ಯೂನ್ ಗೂ ಹೋಲಿಕೆ ಮಾಡಿ ಸಾಮ್ಯತೆ ಇದೆ ಎಂದು ವಾದ ಮಾಡ್ತಿದ್ದಾರೆ..
ಆದ್ರೆ ಅನೇಕರು ಇಂತಹ ವಾದಗಳಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಿ.. ಈ ಎರೆಡೂ ಹಾಡುಗಳಿಗೂ ಯಾವುದೇ ಸಾಮ್ಯತೆ ಇಲ್ಲ ಎನ್ನುತ್ತಿದ್ದಾರೆ..
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಜನೀಶ್ , ಹೀಗೆ ಹೇಳುತ್ತಾ ಹೋದರೆ ಪ್ರತಿ ಹಾಡಿಗೂ ಸಾಮ್ಯತೆ ಹುಡುಕಬಹುದು ಎಂದು ಬಢಸರ ಹೊರಹಾಕಿದ್ದಾರೆ..
ಅಂದ್ಹಾಗೆ ಅಪ್ಸರ ಲಿ ಹಾಗೂ ಸಿಂಗಾರ ಸೀರೆಯೇ ಹಾಡಿನಲ್ಲಿ ಸಾಮ್ಯತೆ ಕಡಿಮೆ… ಒಂದೇ ರೀತಿಯಿದೆ ಎಂದು ಎಲ್ಲಿಯೂ ಅನಿಸುವುದಿಲ್ಲ.. ಆದ್ರೂ ಅದ್ಯಾಕೋ ಕೆಲವರು ಈ ರೀತಿ ವಾದ ಮಾಡ್ತಿದ್ದಾರೆ.. ಈ ಬಗ್ಗೆ ಮುಂದೆ ಸಿನಿಮಾ ತಂಡ ನಾದ್ರೂ ಪ್ರತಿಕ್ರಿಯೆ ನೀಡಲಿದ್ಯಾ ಕಾದು ನೋಡ್ಬೇಕಿದೆ..