Rakul preeth : ಜಕ್ಕಿ ಜೊತೆಗೆ ಶೀಘ್ರವೇ ಕನ್ನಡದ ‘ಗಿಲ್ಲಿ’ ಬೆಡಗಿಯ ಮದುವೆ..!!
ಸೌತ್ ಸಿನಿಮಾ ಇಂಡಸ್ಟ್ರಿಯಿಂದ ಬಾಲಿವುಡ್ ಗೆ ಹಾರಿದ್ದ ನಟಿ ರಕುಲ್ ಪ್ರೀತ್ ಸದ್ಯ ಬಾಲಿವುಡ್ ನಿರ್ಮಾಪಕ ಜಕ್ಕಿ ಜೊತೆಗೆ ರಿಲೇಷನ್ ಶಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ.. ಸದಾ ಒಟ್ಟಾಗಿಯೇ ಕಾಣಿಸಿಕೊಳ್ಳುವ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಹರಿದಾಡ್ತಿದೆ..
ಅಂದ್ಹಾಗೆ ರಾಕುಲ್ ಸಹೋದರ ಅಮನ್ ಸಿಂಗ್ ವಾಹಿನಿಯ ಜೊತೆ ಮಾತನಾಡುತ್ತಾ, ಜಕ್ಕಿ ಬಗ್ ನಾನಿ ಜೊತೆ ರಾಕುಲ್ ಮದುವೆ ಆಗುತ್ತಿರುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಮದುವೆ ದಿನಾಂಕ ಮತ್ತು ಜಾಗವನ್ನು ಅಂತಿಮಗೊಳಿಸುವುದಷ್ಟೇ ಬಾಕಿ ಎಂದೂ ಹೇಳಿದ್ದು ಮದುವೆ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ..
ಅಂದ್ಹಾಗೆ ಕನ್ನಡದ ಗಿಲ್ಲಿ ಸಿನಿಮಾ ಮೂಲಕ ರಕುಲ್ ಪ್ರೀತ್ ಕನ್ನಡ ಸಿನಿಪ್ರಿಯರಲ್ಲಿ ಜನಪ್ರಿಯತೆ ಪಡೆದಿದ್ದಾರೆ..