ಕಿರುತೆರೆ ಖ್ಯಾತ ನಟಿ , ಆಕಾಶ ದೀಪ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ದಿವ್ಯಾ ಶ್ರೀಧರ್ ಇತ್ತೀಚೆಗೆ ತಮ್ಮ ಪತಿ ಹಲ್ಲೆ ನಡೆಸಿದ್ದಾಗಿ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದರು.. ಅಷ್ಟೇ ಅಲ್ಲದೇ ಡಿಶ್ಚಾರ್ಜ್ ಆದ ಬೆನ್ನಲ್ಲೇ ಸೀದಾ ಪತಿ ಮನೆಗೆ ಹೋಗಿ ರಂಪ ಮಾಡಿದ್ದರು.. ತನಗೆ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನೆ ಮಾಡಿ ಕೂಗಾಡಿದ್ದರು..
ಇದರ ವಿಡಿಯೋವನ್ನ ಖುದ್ದ ಅಮ್ಜಾದ್ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಮಾಧ್ಯಮದವರಿಗೆ ನೀಡಿದ್ದರು.. ದಿವ್ಯಾ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ಮಹಿಳಾ ಆಯೋಗವೂ ಪ್ರತಿಭಟನೆ ನಡೆಸಿ ಅಮ್ಜಾದ್ ಬಂಧನಕ್ಕೆ ಆಗ್ರಹಿಸಿದ್ದರು..
ಇದೀಗ ಕೊನೆಗೂ ಅಮ್ಜಾದ್ ಬಂಧನವಾಗಿದೆ.. ಅಂದ್ಹಾಗೆ ಇತ್ತೀಚೆಗೆ ಈ ಬಗ್ಗೆ ಉಲ್ಟಾ ಹೊಡೆದಿದ್ದ ಅಮ್ಜಾದ್ ನಾನು ಯಾವುದೇ ಹಲ್ಲೆ ನಡೆಸಿಲ್ಲ.. ನಮ್ಮ ಮನೆಯ ಸಿಸಿಟಿವಿ ಬೇಕಿದ್ರೆ ಪರಿಶೀಲಿಸಿ , ನಾನೂ ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡುವೆ.. ದಿವ್ಯಾ ಕೆಟ್ಟ ಸ್ನೇಹಿತರ ಜೊತೆ ಸೇರಿ ಹೀಗೆ ಆಡುತ್ತಿದ್ದು , ಗರ್ಭಿಣಿಯಾಗಿರುವ ಆಕೆಗೆ ಮಕ್ಕಳು ಮಾಡಿಕೊಳ್ಳಲು ಇಷ್ಟವಿಲ್ದೇ ಅಬಾರ್ಷನ್ ಮಾಡಿಸಿಕೊಳ್ಳುವುದಕ್ಕೆ ಇಷ್ಟೆಲ್ಲಾ ಡ್ರಾಮಾ ಮಾಡ್ತಿದ್ದಾರೆ ಎಂದು ಆರೋಪಿಸಿದ್ದರು..
ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು.
ಆಕಾಶ ದೀಪ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದರು.. ನಂತರ ತಮಿಳು ಕಿರುತೆರೆಗೆ ಎಂಟ್ರಿ ಕೊಟ್ಟು ಅಲ್ಲಿಯೂ ಮಿಂಚಿದರು..
ತಮಿಳು ಧಾರಾವಾಹಿಯ ಸಂದರ್ಭದಲ್ಲೇ ಸಹ ನಟ ಅನರ್ವ್ @ ಅಮ್ಜಾದ್ ಖಾನ್ ರನ್ನ ಪ್ರೀತಿಸಿ ,ಮದುವೆಯಾಗಿದ್ದರು..
ಇದೀಗ ಕೊನೆಗೂ ಅಮ್ಜಾದ್ ಖಾನ್ ನನ್ನ ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.. ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಅಲ್ಲದೇ ಬಲವಂತವಾಗಿ ನನ್ನ ಇಸ್ಲಾಂಗೆ ಮತಾಂತರ ( love jihad ) ಮಾಡಿಸಲಾಗಿದೆ ಎಂದು ದಿವ್ಯಾ ಆರೋಪಿಸಿದ್ದರು..
ದಿವ್ಯಾ ದೂರು ನೀಡಿದ ಆಧಾರದ ಮೇಲೆ ಅಮ್ಜಾದ್ ನನ್ನ ಅರೆಸ್ಟ್ ಮಾಡಲಾಗಿದೆ.. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದರು. ಈ ದೂರಿನ ಅನ್ವಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.