ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಇದೀಗ ರಿಲೀಸ್ ಮಾಡಲಾಗ್ತಿದ್ದು .
ಇಂದು ( ಅಕ್ಟೋಬರ್ 14) ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. ಹಿಂದಿ ಡಬ್ಬಿಂಗ್ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ..
ಅಂದ್ಹಾಗೆ ತಮಿಳು , ತೆಉಲುಗು ಮಲಯಾಳಂನಲ್ಲೂ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.. ಆದ್ರೆ ಕನ್ನಡದಲ್ಲೇ ಬಹುತೇಕ ರಾಜ್ಯಗಳಲ್ಲಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ ಜನ..
ಮತ್ತೊಂದೆಡೆ IMDB ರೇಟಿಂಗ್ ನಲ್ಲೂ ಕಾಂತಾರದ್ದೇ ಹವಾ..!!
ಭಾರತದಲ್ಲಿ ಕಾಂತಾರಗೆ ಅತಿ ಹೆಚ್ಚು IMDB ರೇಟಿಂಗ್ ಸಿಕ್ಕಿದೆ..
ಇತ್ತ ಕಾಂತಾರ ಸಿನಿಮಾ 100 ಕೋಟಿ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿದೆ.
ಕಾಂತಾರ ಸಿನಿಮಾ ನೋಡಿದ ತಮಿಳಿನ ಸ್ಟಾರ್ ನಟ ಧನುಷ್ ಟ್ವಿಟರ್ ನಲ್ಲಿ ರಿವೀವ್ ಕೊಟ್ಟಿದ್ದಾರೆ.. ಸಿನಿಮಾ ನೋಡಲೇಬೇಕು.. ಅದ್ಭುತವಾದ ಚಿತ್ರವೆಂದು ಹಾಡಿ ಹೊಗಳಿದ್ದಾರೆ..
ರಿಷಬ್ ಶೆಟ್ಟಿ, ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು. ಅಭಿನಂದನೆಗಳು ಹೊಂಬಾಳೆ ಫಿಲ್ಮ್ಸ್ .. ಚಿತ್ರದ ಎಲ್ಲಾ ನಟರು ಮತ್ತು ತಂತ್ರಜ್ಞರಿಗೆ ಒಂದು ದೊಡ್ಡ ಅಪ್ಪುಗೆ. ದೇವರು ಆಶೀರ್ವದಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಧನ್ಯವಾದಗಳು @dhanushkraja ಸಹೋದರ ಎಂದು ಹಾರ್ಟ್ ಈಮೋಜಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ತಮಿಳಿನ ಸ್ಟಾರ್ ಸಿಂಬು ಕೂಡ ಸಿನಿಮಾ ಹಾಗೂ ರಿಷಬ್ ನಟನೆಯನ್ನ ಹಾಡಿ ಹೊಗಳಿದ್ದರು..