ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಇದೀಗ ರಿಲೀಸ್ ಮಾಡಲಾಗ್ತಿದ್ದು .
ಇಂದು ( ಅಕ್ಟೋಬರ್ 14) ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. ಹಿಂದಿ ಡಬ್ಬಿಂಗ್ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ..
ಅಂದ್ಹಾಗೆ ತಮಿಳು , ತೆಉಲುಗು ಮಲಯಾಳಂನಲ್ಲೂ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.. ಆದ್ರೆ ಕನ್ನಡದಲ್ಲೇ ಬಹುತೇಕ ರಾಜ್ಯಗಳಲ್ಲಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ ಜನ..
ಅಷ್ಟೇ ತಮಿಳುನಾಡಿನಲ್ಲಿ ಪರಭಾಷಾ ಸಿನಿಮಾಗಳನ್ನ ನೋಡುವುದು ತುಸು ಕಡಿಮೆಯೇ.. ಆದ್ರೆ ಅಲ್ಲೂ ಕಾಂತಾರ ಮೋಡಿ ಮಾಡಿದೆ.. ಪ್ರೇಕ್ಷಕರು ಕನ್ನಡದಲ್ಲಿಯೇ ಸಿನಿಮಾ ವೀಕ್ಷಿಸಿ ಮೆಚ್ಚಿಕೊಳ್ತಿದ್ದಾರೆ.. ರಿಷಬ್ ನಟನೆಗೆ ಬಹುಪರಾಕ್ ಅನ್ನುತ್ತಿದ್ದಾರೆ..
ಅಂತೆಯೇ ಓರ್ವ ಪ್ರೇಕ್ಷಕರು ನೀಡಿರುವ ರಿವ್ಯೂ ದೀಗ ಭಾರೀ ವೈರಲ್ ಆಗ್ತಿದೆ..
ತಮಿಳು ಪ್ರೇಕ್ಷಕರೊಬ್ಬರು ರಿಷಬ್ ಶೆಟ್ಟಿ ಮುಂದೆ ಮಣಿರತ್ನಂ ಪಾಪ , ಕಾಂತಾರ ಮುಂದೆ ಮಣಿರತ್ನಂ ಪಾಪ. ಎಮೋಷನ್ಸ್ ಅಷ್ಟು, ಅಷ್ಟು ಅದ್ಭುತವಾಗಿದೆ. ಚಿತ್ರದಲ್ಲಿರುವ ಪ್ರತಿಯೊಂದು ಅಂಶಕ್ಕೂ ಜೀವಬಂದು ನಟಿಸಿದೆ. ಪೊನ್ನಿಯಿನ್ ಸೆಲ್ವನ್ ಬಜೆಟ್ ನಲ್ಲಿ 5% ಬಜೆಟ್ ಸಿನಿಮಾ ಇದು. ಆದರೆ ಸಿನಿಮಾ ಮಾತ್ರ ಅದ್ಭುತವಾಗಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ಕಲ್ಕಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಅದ್ಭುತ, ಅತ್ಯದ್ಭುತ. ಆದರೆ ಸಿನಿಮಾ ಮಾತ್ರ ವೇಸ್ಟ್. ಕಾಂತಾರ ಹಿಮಾಲಯ ಪರ್ವತ. ಅದರ ಮುಂದೆ ಪೊನ್ನಿಯಿನ್ ಸೆಲ್ವನ್ ಪಾಪ. ಎರಡನ್ನೂ ಹೋಲಿಸಲು ಸಾಧ್ಯವಿಲ್ಲ. ಯಾವ ಧರ್ಮವೂ ಇಲ್ಲ. ನಮ್ಮನ್ನು ಮೀರಿದ ಶಕ್ತಿಯೊಂದು ಈ ಪ್ರಪಂಚದಲ್ಲಿ ಇದೆ. ಇದನ್ನು ನೋಡಿ ಎಲ್ಲರೂ ಕಲಿಬೇಕು.
ಮಣಿರತ್ನಂ ರೋಜಾ ಸಿನಿಮಾ ನೋಡಿ ಹೆಮ್ಮೆ ಆಗಿತ್ತು. ಆದರೆ ಈ ಸಿನಿಮಾ ನೋಡಿದ ಮೇಲೆ ಮಣಿರತ್ನಂ ಪಾಪ ಎನ್ನಿಸ್ತಾರೆ. ರಿಷಬ್ ಶೆಟ್ಟಿ ಕೈ ಹಿಡಿದು ಮಣಿರತ್ನಂ ನಡೀಬೇಕು. ಭಾಷೆ ಅರ್ಥವಾಗದೆಯೇ ನನ್ನಿಂದ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಭಾಷೆ ಅರ್ಥವಾದವರು ದೇವರು ಮೈ ಮೇಲೆ ಬಂದಂತೆ ತ್ಸುಕರಾಗಿರುತ್ತಾರೆ. ಸಿನಿಮಾ ಬಹಳ ಚೆನ್ನಾಗಿದೆ. ವರ್ಣಿಸಲು ಮಾತು ಬರುತ್ತಿಲ್ಲ. ಇನ್ನು ನಾನು ಅದೇ ಗುಂಗಿನಲ್ಲಿ ಇದ್ದೀನಿ ಎಂದಿದ್ದಾರೆ..
ಅಷ್ಟೇ ಅಲ್ಲ ಲೈಫಲ್ಲಿ ಫಸ್ಟ್ ಟೈಂ ಕನ್ನಡ ಚಿತ್ರ ನೋಡಿದ್ದು.. ಆ ಮಣ್ಣು, ನೆಲ, ಜನರನ್ನು ಪ್ರೀತಿಸಿದ್ದಾರೆ. ಅದಕ್ಕೆ ಸಿನಿಮಾ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ ಸಾಟಿಯಿಲ್ಲದ ನಿರ್ದೇಶನ, ಸಾಟಿಯಿಲ್ಲದ ನಟನೆ, ಪ್ರತಿಯೊಬ್ಬರು, ಗಿಡ, ಮರ, ರೆಂಬೆ ಕೊಂಬೆ ಎಲ್ಲವೂ ನಟಿಸುವಂತೆ ಮಾಡಿದ್ದಾರೆ.
ಸೌಂಡ್ ಎಫೆಕ್ಟ್, ಸಿನಿಮಾಟೋಗ್ರಫಿ ಎಲ್ಲವೂ ಅದ್ಭುತವಾಗಿದೆ. ಮತ್ತೆ ನೋಡ್ತಿನಿ. ಫ್ಯಾಮಿಲಿ ಜೊತೆ ನೋಡ್ತೀನಿ. ಮಕ್ಕಳನ್ನು ಕರ್ಕೊಂಡು ಬರುತ್ತೀನಿ ಎಂದು ಕಾಂತಾರ ಸಿನಿಮಾವನ್ನ ಮನಸ್ಪೂರ್ತಿಯಾಗಿ ಹೃದಯದಿಂದ ಮೆಚ್ಚಿ ಹಾಡಿ ಹೊಗಳಿದ್ದಾರೆ..