ರಿಷಬ್ ಶೆಟ್ಟಿಯ ಕಾಂತಾರ ಚಿತ್ರವು ಯಶ್ ಕೆಜಿಎಫ್ 2 ಸಿನಿಮಾವನ್ನೂ ಮೀರಿ ರೇಟಿಂಗ್ ಪಡೆದಿದೆ.. ಅಷ್ಟೇ ಅಲ್ಲ IMDb ಯಲ್ಲಿ SS ರಾಜಮೌಳಿಯವರ RRR ಸಿನಿಮಾವನ್ನೂ ಹಿಂದಿಕ್ಕಿದೆ.. ಇದರೊಂದಿಗೆ ಕಾಂತಾರ ಐಎಂಡಿಬಿಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರವಾಗಿದೆ.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ IMDb ರೇಟಿಂಗ್‌ಗಳಲ್ಲಿ ಯಶ್ ಅಭಿನಯದ KGF 2 ಅನ್ನು ಹಿಂದಿಕ್ಕಿದೆ. ಕಾಂತಾರ 10 ರಲ್ಲಿ 9.5 ರ IMDb ರೇಟಿಂಗ್ ಅನ್ನು ಹೊಂದಿದೆ.. KGF: ಅಧ್ಯಾಯ 2 ವೇದಿಕೆಯಲ್ಲಿ 10 ರಲ್ಲಿ 8.4 ರ ರೇಟಿಂಗ್ ಅನ್ನು ಹೊಂದಿದೆ.
RRR ಮತ್ತು KGF ಗಿಂತ ಕಾಂತಾರ ಉತ್ತಮವಾಗಿದೆ ಮತ್ತು ಅದು ಆಸ್ಕರ್ ನಂತಹ ಅಂತರರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಬೇಕು ಎಂದೂ ಕೂಡ ಅಭಿಪ್ರಾಯಗಳು ವ್ಯಕ್ತವಾಗ್ತಿದೆ..