Kantara : ಕನ್ನಡದಲ್ಲಿ ಅಬ್ಬರಿಸಿ ಬೊಬ್ಬಿರಿದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಅಬ್ಬರಿಸುತ್ತಿದೆ.. ಇಂದು ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಮುಂದೆ ತಮಿಳು , ತೆಲುಗು , ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಲಿದೆ..
ಆದ್ರೆ ಕರಾವಳಿ ಸಂಸ್ಕ್ರತಿ ಅನಾವರಣಗೊಳಿಸಿರುವ ಕಾಂತಾರ ಸಿನಿಮಾ ತುಳುಗೂ ಕೂಡ ಡಬ್ ಆಗಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ.. ಮುಂದಿನ ದಿನಗಳಲ್ಲಿ ಕಾಂತಾರ ಸಿನಿಮಾ ತುಳುಗೂ ಡಬ್ ಆಗಲಿದ್ಯಂತೆ..
ತುಳುವಿನಲ್ಲಿ ಸಿನಿಮಾ ರಿಲೀಸ್ ಆಗಲಿದ್ದು , ಮತ್ತಷ್ಟು ಕರಾವಳಿ ಭಾಗದ ಜನರಿಗೆ ಸಿನಿಮಾ ಹತ್ತಿರವಾಗಲಿದೆ..