ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಇದೀಗ ರಿಲೀಸ್ ಮಾಡಲಾಗ್ತಿದ್ದು .
ಇಂದು ( ಅಕ್ಟೋಬರ್ 14) ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. ಹಿಂದಿ ಡಬ್ಬಿಂಗ್ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ..
ಅಂದ್ಹಾಗೆ ತಮಿಳು , ತೆಉಲುಗು ಮಲಯಾಳಂನಲ್ಲೂ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.. ಆದ್ರೆ ಕನ್ನಡದಲ್ಲೇ ಬಹುತೇಕ ರಾಜ್ಯಗಳಲ್ಲಿ ಕಾಂತಾರ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ ಜನ..
ಮತ್ತೊಂದೆಡೆ IMDB ರೇಟಿಂಗ್ ನಲ್ಲೂ ಕಾಂತಾರದ್ದೇ ಹವಾ..!!
ಭಾರತದಲ್ಲಿ ಕಾಂತಾರಗೆ ಅತಿ ಹೆಚ್ಚು IMDB ರೇಟಿಂಗ್ ಸಿಕ್ಕಿದೆ..
ಇತ್ತ ಕಾಂತಾರ ಸಿನಿಮಾ 100 ಕೋಟಿ ಕಲೆಕ್ಷನ್ ನತ್ತ ಮುನ್ನುಗ್ಗುತ್ತಿದೆ.
ಅಷ್ಟೇ ಯಾಕೆ KGF 2 ಕಲೆಕ್ಷನ್ ಮೀರಿ ಸಿನಿಮಾ ಮುನ್ನುಗ್ಗುತ್ತಿದೆ..
ಕಾಂತಾರ ಸಿನಿಮಾ ಮೊದಲ ವಾರಕ್ಕಿಂತ ಎರಡನೇ ವಾರ 40%ರಷ್ಟು ಕಲೆಕ್ಷನ್ ಮಾಡಿದೆ. ಎರಡನೇ ವಾರದಲ್ಲಿ 36.50 ಕೋಟಿ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯ ಒಟ್ಟು ಗಳಿಕೆ 62.75 ಕೋಟಿ ರೂಪಾಯಿ ಗಳಿಸಿದೆ. ಎರಡೇ ವಾರಕ್ಕೆ ನೂರು ಕೋಟಿ ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ.
ಈ ಮೂಲಕ KGF 2 ದಾಖಲೆಯನ್ನ ಧೂಳಿಪಟ ಮಾಡಿದೆ..