Puneeth Rajkumar : ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ನಾನಾ ರೀತಿಯಲ್ಲಿ ಸ್ಮರಿಸುತ್ತಾ ಗೌರವಿಸಲಾಗುತ್ತಿದೆ.. ಇತ್ತೀಚೆಗೆ 67ನೇ ಫಲ್ಮ್ ಫೇರ್ ಅವಾರ್ಡ್ ಸೌತ್ 2022 ರಲ್ಲಿ ಅವರಿಗೆ ಜೀವಮಾನ ಸಾಧನೆಗಾಗಿ ಮರಣೋತ್ತರ ಪ್ರಶಸ್ತಿ ನೀಡಿ ಸ್ಮರಿಸಲಾಯ್ತು…
ಇದೀಗ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಇಡಬೇಕು ಎಂದು BBMPಗೆ ಮನವಿ ಮಾಡಲಾಗಿದೆ.
ಶಿವಾನಂದ ಸರ್ಕಲ್ ಬಳಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಇರುವುದರಿಂದ ಪುನೀತ್ ಅವರ ಹೆಸರನ್ನು ಈ ಬ್ರಿಡ್ಜ್ ಗೆ ಇಡಬೇಕು ಎಂದು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್ ಆರ್ ರಮೇಶ್ ಅವರು ಮನವಿ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾ ರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೂ ಅದ್ಭುತ ಸಂದೇಶವನ್ನು ಸಾರಿದ್ದಾರೆ. ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಬೆಂಗಳೂರಿಗೂ ಅವರ ಕೊಡುಗೆ ಸಾಕಷ್ಟಿದೆ. ಅವರ ನೆನಪು ನಮ್ಮೊಂದಿಗೆ ಶಾಶ್ವತವಾಗಿ ಇರಬೇಕು. ಹಾಗಾಗಿ ಮಹಾನಗರ ಪಾಲಿಕೆಗೆ ಮನವಿ ಮಾಡಿರುವೆ. ಶಿವಾನಂದ ಸರ್ಕಲ್ ಬಳಿ ಇರುವ ಸ್ಟಿಲ್ ಬ್ರಿಡ್ಜ್ ಗೆ ಅಪ್ಪು ಹೆಸರು ಇಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.