ಮೊದಲೇ ನಾಗಚೈತನ್ಯರ ಜೊತೆಗಿನ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿ ಡಿವೋರ್ಸ್ ಪಡೆದಿರುವ ನೋವಲ್ಲಿ ಸಮಂತಾ ಕುಗ್ಗಿದ್ದಾರೆ.. ಆದ್ರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಗಲೇ ಅವರ ಬದುಕಿನಲ್ಲಿ ಮತ್ತೊಬ್ಬರು ದೂರವಾಗಿದ್ದಾರೆ..
ಹೌದು..!
ಆತ್ಮೀಯ ಸ್ನೇಹಿತೆ ಚಿನ್ಮಯಿ ಅವರ ಜೊತೆಗೆ ಶಾಸ್ವತವಾಗಿ ಫ್ರೆಂಡ್ ಶಿಪ್ ಮುರಿದುಕೊಂಡಿದ್ದಾರೆ ಎಂಬ ಗಾಸಿಪ್ ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ..
ಏ ಮಾಯ ಚೇಸಾವೆ ಮೂಲಕ ಸಿನಿ ಪಯಣ ಆರಂಭಿಸಿದ ಸಮಂತಾರ ಪಾತ್ರಕ್ಕೆ ಖ್ಯಾತ ಡಬ್ಬಿಂಗ್ ರ್ಟಿಸ್ಟ್ ಚಿನ್ಮಯಿ ಶ್ರೀಪಾದ ಧ್ವನಿ ನೀಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು.. ಇದಾದ ನಂತರ ಚಿನ್ಮಯಿ – ಸಮಂತಾ ನಡುವೆ ತ್ಮೀಯತೆ ಹೆಚ್ಚಾಗಿ ಇಬ್ಬರೂ ಒಳ್ಳೆಯ ಗೆಳತಿಯರಾದರು..
ಸದಾ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಫೋಟೋಗಳನ್ನ ಶೇರ್ ಮಾಡಿಕೊಳ್ತಿದ್ದರು ಕೂಡ.. ತಮ್ಮ ಮುಂದಿನ ಚಿತ್ರ ಯಶೋದಾಗೆ ಸಮಂತಾನೇ ಡಬ್ಬಿಂಗ್ ಮಾಡುವುದಾಗಿ ಹಠ ಮಾಡಿದ್ದರು ಎನ್ನಲಾಗಿತ್ತು. ಆದರೆ ನಿರ್ಮಾಪರು ಮಾತ್ರ ಚಿನ್ಮಯಿ ಅವರಿಗಾಗಿಯೇ ಪಟ್ಟು ಹಿಡಿದಿದ್ದಾರೆ ಎನ್ನ ಲಾಗಿದೆ.. ಆದ್ರೆ ಖುದ್ದು ಡಬ್ಬಿಂಗ್ ಮಾಡುವುದಾಗಿ ಸಮಂತಾ ಹಠ ಹಿಡಿದಿರುವ ಹಿಂದಿನ ಕಾರಣವೇನೆಂದು ಗಾಸಿಪ್ ಮಾತ್ರ ಹರಿದಾಡ್ತಿದೆ..