Sudeep-chris gyle : ಸ್ಯಾಂಡಲ್ ವುಡ್ ನ ಬಾದ್ ಶಾ, ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಕಲ ಕಲಾವಲ್ಲಭವರು.. ಉತ್ತಮವಾಗಿ ಅಡುಗೆ ಮಾಡ್ತಾರೆ , ನಿರೂಪಕರೂ ಹೌದು..
ಆದ್ರೆ ಅವರಿಗೆ ಕ್ರಿಕೆಟ್ ನಲ್ಲಿ ವಿಶೇಷ ಒಲವಿದೆ ಅನ್ನೋದು ಗೊತ್ತಿರುವ ವಿಚಾರವೇ.. ಇದೀಗ ಕಿಚ್ಚ ಸುದೀಪ್ ಮತ್ತು ವೆಸ್ಟ್ ಇಂಡೀಸ್‍ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಸೂಪರ್ ಟೆನ್ ಕ್ರಿಕೆಟ್ ಲೀಗ್ ನಲ್ಲಿ ಸೆಲೆಬ್ರಿಟಿಗಳು ಮತ್ತು ವಿಶ್ವದ ಮಾಜಿ ಕ್ರಿಕೆಟ್ ಆಟಗಾರರು ಜೊತೆ ಸೇರಿ ಆಡಲಿದ್ದಾರೆ. 10 ಓವರ್ ಗಳ ಸ್ವರೂಪದ ಕ್ರಿಕೆಟ್ ಲೀಗ್ ಇದಾಗಿದೆ.. 2 ದಿನ ಬೆಂಗಳೂರಿನಲ್ಲಿ ಸೂಪರ್ ಟೆನ್ ಲೀಗ್ ನಡೆಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ.
ಕ್ರಿಕೆಟ್ ಲೀಗ್ ನಲ್ಲಿ ಕನ್ನಡ , ಬಾಲಿವುಡ್ , ತಮಿಳು , ತೆಲುಗು ಚಿತ್ರರಂಗದ ನಟರು ಮತ್ತು ವಿಶ್ವದ ಮಾಜಿ ಕ್ರಿಕೆಟಿಗರು ಒಟ್ಟಿಗೆ ಸೇರಿ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗೇಲ್, ಜಗತ್ತಿನಾದ್ಯಂತ ಇರುವ ನನ್ನ ಕ್ರಿಕೆಟ್ ಗೆಳೆಯರು ಮತ್ತು ಚಿತ್ರರಂಗದ ಸ್ಟಾರ್ ಗಳ ಜೊತೆಗೆ ಕ್ರಿಕೆಟ್ ಆಡಲು ಎಕ್ಸೈಟ್ ಆಗಿದ್ದೇನೆ. ಪಂದ್ಯಾವಳಿಯು ಸೂಪರ್ 10 ಮಾದರಿಯಲ್ಲಿ ಇರಲಿದ್ದು, ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.