Big Boss Kannada 9 – ಬಾಸ್ ಕನ್ನಡ 9 ರಲ್ಲಿ ಸಾಕಷ್ಟು ಹೈಲೇಟ್ ಆಗುತ್ತಿರುವ ಸ್ಪರ್ಧಿಗಳೆಂದ್ರೆ ಪ್ರಶಾಂತ್ ಸಂಬರ್ಗಿ , ರೂಪೇಶ್ ರಾಜಣ್ಣ.. ಇಬ್ಬರೂ ಹೋರಾಟಗಾರರೇ ಆಗಿದ್ದಾರೆ.. ಇಬ್ಬರ ನಡುವೆ ಆಗಾಗ ವಾಕ್ಸಮರವೂ ನಡೆಯುತ್ತಲೇ ಇರುತ್ತದೆ..
ಕೆಲವೊಮ್ಮೆ ವಯಕ್ತಿಕ ವಿಚಾರಗಳನ್ನೂ ಎಳೆತಂದು ಕಿತ್ತಾಡಿಕೊಳ್ಳುವುದೂ ಉಂಟು.. ಇತ್ತೀಚೆಗೆ ಮತ್ತೆ ಕಿತ್ತಾಟ ನಡೆದಿದ್ದು ಸಂಬರ್ಗಿ ತಾಯಿಗೆ ಅವಮಾನ ಮಾಡಿದ್ದರು ರೂಪೇಶ್ ರಾಜಣ್ಣ.. ಈ ಹಿನ್ನೆಲೆ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ ರೂಪೇಶ್ ರಾಜಣ್ಣ..
ಚಿನ್ನದ ಗಣಿ ಟಾಸ್ಕ್ ನಲ್ಲಿ ಇಬ್ಬರ ಕಿತ್ತಾಟ ತಾರಕ್ಕೇರಿದೆ.. ಪರಸ್ಪರ ನಾಲಿಗೆ ಹರಿಬಿಟ್ಟಿರುವ ಇಬ್ಬರೂ ತಮ್ಮ ವಯಕ್ತಿ ಕಿತ್ತಾಟದಲ್ಲಿ ಮನೆಯವರನ್ನ ಎಖಳೆತರುತ್ತಿದ್ದಾರೆ.. ರೂಪೇಶ್ ರಾಜಣ್ ಸಂಬರ್ಗಿ ಅವರ ತಾಯಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಇದ್ರಿಂದ ಸಂಬರ್ಗಿ ಅವರ ಕೋಪ ಮತ್ತಷ್ಟು ತಾರಕ್ಕೇರಿತ್ತು..
ನನ್ನ ತಾಯಿಗೆ ಅವಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ ಎಂದು ರೂಪೇಶ್ ಮೇಲೆ ಸಂಬರ್ಗಿ ಕೂಗಾಡಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ರೂಪೇಶ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುವೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ..
ಒಟ್ಟಾರೆ ಈ ಇಬ್ಬರ ಜಗಳದ ರೀತಿಯಿಂದ ಇವರ ಸಣ್ಣತನದಿಂದ ಿವರ ವ್ಯಕ್ತಿತ್ವಕ್ಕೆ ಚ್ಯುತಿ ಬಂದಿರುವುದಂತೂ ಸತ್ಯ..
ಇದನ್ನೂ ಓದಿ : https://cinibazaar.com/2022/10/15/biggboss-kannada…shree-cinibazaar/