BiggBoss Kannada 9 ಸಾಕಷ್ಟು ರೋಚಕತೆಯಿಂದ ಕೂಡಿದ್ದು , ಮೂರನೇ ವಾರ ಗುರೂಜಿ ಕ್ಯಾಪ್ಟನ್ ಆಗಿದ್ದರು.. ಸದ್ಯ ಚಿನ್ನದ ನಾಣ್ಯಗಳನ್ನು ಸಂಗ್ರಹಿಸುವ ಟಾಸ್ಕ್ ನಲ್ಲಿ ಕಂಟೆಸ್ಟೆಂಟ್ ಗಳ ಜಟಾಪಟಿ ಪ್ರೇಕ್ಷಕರನ್ನ ರಂಜಿಸುತ್ತಿದೆ.. ಬಿಗ್ ಬಾಸ್ ಕನ್ನಡ ಸೀಸನ್ 9 ಮೂರನೇ ವಾರದಲ್ಲಿ ಅತ್ಯಧಿಕ TRP ರೇಟಿಂಗ್ ಪಡೆದುಕೊಂಡಿದೆ.
ಪ್ರಶಾಂತ್ ಸಂಬರಗಿ ವಾರದದಲ್ಲಿ ಭಾರೀ ಗಮನ ಸೆಳೆದರು.. ರೂಪೇಶ್ ರಾಜಣ್ಣ ಮತ್ ಸಂಬರ್ಗಿ ನಡುವಿನ ಗಲಾಟೆಯು ವಯಕ್ತಿಕ ವಿಚಾರಗಳನ್ನ ಎತ್ತಾಡುವ ಹಂತಕ್ಕೂ ತಲುಪಿತ್ತು..
ಇನ್ನೂ ಈಗಾಗಲೇ ಮನೆಯಿಂದ ಇಬ್ಬರು ಕಂಟೆಸ್ಟೆಂಟ್ ಗಳು ಹೊರನಡೆದಾಗಿದೆ.. ಮೊದಲನೇ ವಾರ ಐಶ್ವರ್ಯ ಪಿಸ್ಸೆ , 2ನೇ ವಾರ ಸೈಕ್ ನವಾಜ್ ಔಟಾದ್ರು..
ಇದೀಗ ಈ ವಾರ ಯಾರು ಮನೆಯಿಂದ ಹೊರ ನಡೆಯುತ್ತಾರೆ ಎಂಬ ಕುತೂಹಲ , ಪ್ರಶ್ನೆಗಳಿಗೆ ಒಂದಷ್ಟು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ..
ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪಟ್ಟಿ..
ಅಮೂಲ್ಯ
ರೂಪೇಶ್ ರಾಜಣ್ಣ
ಪ್ರಶಾಂತ್
ದರ್ಶ್ ಚಂದ್ರಪ್ಪ
ದಿವ್ಯಾ ಉರುಡುಗ
ಮಯೂರಿ
ವಿನೋದ್
ದೀಪಿಕಾ
ರೂಪೇಶ್ ಶೆಟ್ಟಿ
ಅನುಪಮಾ..
ಆರ್ಯವರ್ಧನ್ ಗುರೂಜಿ , ಅರುಣ್ ಸಾಗರ್ , ನೇಹಾ , ಸಾನ್ಯಾ ಐಯರ್ , ರಾಕೇಶ್ ಆಡಿಗ , ಕಾವ್ಯಶ್ರೀ ಸದ್ಯಕ್ಕೆ ಸೇಫ್ ಆಗಿದ್ದಾರೆ..
ನಾಮಿನೇಟ್ ಆಗಿರುವ ಸ್ಪರ್ಧಿಗಳೆಲ್ಲರೂ ಟಾಸ್ಕ್ ಹಾಗೂ ಎಲ್ಲಾ ವಿಚಾರದಿಂದಲೂ ಹೈಲೇಟ್ ಆಗ್ತಿದ್ದು , ಈ ಪೈಕಿ ಮಯೂರಿ ಇನ್ನೂ ಓಪನ್ ಅಪ್ ಆಗದೇ ಸೈಲೆಂಟ್ ಆಗಿದ್ದಾರೆ ಅನ್ನಿಸುತ್ತಿದ್ದು , ಸೋಷಿಯಲ್ ಮೀಡಿಯಾದಲ್ಲೂ ಈ ವಾರ ಮಯೂರಿ ಹೋಗಬಹುದು ಎನ್ನಲಾಗ್ತಿದೆ..
ಆದ್ರೆ ನಾಮಿನೇಟ್ ಆಗದೇ ಇದ್ದರೂ ಆರ್ಯವರ್ಧನ್ ಗುರೂಜಿ ಈ ವಾರ ಮನೆಯಿಂದ ಹೊರಗಡೆ ಹೋಗಬಹುದು ಎನ್ನಲಾಗ್ತಿದೆ.. ಕಾರಣ ಅವರೇ ರೂಪೇಶ್ ಬಳಿ ಮಾತನಾಡಿದ್ದ ರೀತಿ… ಆರ್ಯವರ್ಧನ್ ಗುರೂಜಿ ಇತ್ತೀಚೆಗೆ ರೂಪೇಶ್ ಜೊತೆಗೆ ಮಾತನಾಡ್ತಾ ಸಾಕು , ಈ ವಾರ ನಾನು ಮನೆಗೆ ಹೋಗಲು ಕೇಳುತ್ತೇನೆ.. ಆ ರೀತಿ ಆಪ್ಷನ್ ಇದ್ದು ಕಳುಹಿಸಿದ್ರೆ ಹೋಗುವೆ ಇಲ್ಲ ಇಲ್ಲಿ ಮುಂದುವರೆಯುವೆ.. ಇನ್ನೆಷ್ಟು ದಿನಗಳಿದ್ದರೂ ನನ್ನ ವ್ಯಕ್ತಿತ್ವ ಇರುವುದೇ ಹೀಗೆ ಬದಲಾಗುವುದಿಲ್ಲ ಇಲ್ಲಿಗೆ ಬಂದದ್ದೇ ಖುಷಿಯಾಗಿದೆ ಎಂದಿದ್ದರು.. ಹೀಗಾಗಿ ಅವರೇ ಸ್ವ ಇಚ್ಛೆಯಿಂದ ಈ ಬಾರಿ ಮನೆಯಿಂದ ಹೊರ ಹೋಗುರತ್ತಾರಾ ಎಲ್ಲ ಬೇರೆ ಅವರನ್ನ ಎಲಿಮಿನೇಟ್ ಮಾಡಲಾಗುತ್ತದೆಯೇ ಕಾದುನೋಡಬೇಕು..
ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಬಹುದು ಕಮೆಂಟ್ ಮಾಡಿ ತಿಳಿಸಿ..