Harry Potter : ಸರಣಿಯ ಹ್ಯಾಗ್ರಿಡ್ ಖ್ಯಾತಿಯ ಪಾತ್ರಧಾರಿ ರಾಬಿ ಕೋಲ್ಟ್ರೇನ್ ನಿಧನ..!!
ಹ್ಯಾರಿ ಪಾಟರ್ ಫಿಲ್ಮ ಸರಣಿಯ ಹ್ಯಾಗ್ರಿಡ್ ಪಾತ್ರದ ಮೂಲಕ ಪ್ರಪಂಚದಾದ್ಯಂತ ಅಭಿಮಾನಿಗಳನ್ನ ಸಂಪಾದಿಸಿದ್ದ ನಟ ರಾಬಿ ಕೋಲ್ಟ್ರೇನ್ ಶುಕ್ರವಾರ (ಅಕ್ಟೋಬರ್ 14) ವಿಧಿವಶರಾಗಿದ್ದಾರೆ. ಈ ಸುದ್ದಿ ಕೇಳಿ ಸಿನಿಮಾ ಪ್ರೇಮಿಗಳೆಲ್ಲರೂ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.
ನಟ ರಾಬಿ ಕೋಲ್ಟ್ರೇನ್ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ರಾಬಿಯ ಏಜೆಂಟ್ ಬೆಲಿಂಡಾ ರೈಟ್ ಸುದ್ದಿಯನ್ನ ಖಚಿತಪಡಿಸಿದ್ದಾರೆ. “ರಾಬಿ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದಾದ ಬಳಿಕ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ” ಎಂದು ತಿಳಿಸಿದ್ದಾರೆ.
ರಾಬಿಯ ಏಜೆಂಟ್ ತನ್ನ ಹೇಳಿಕೆಯಲ್ಲಿ, “ರಾಬಿ ತುಂಬಾ ಪ್ರತಿಭಾವಂತ ವ್ಯಕ್ತಿ. ಅವರು ಸತತ 3 ಬಾರಿ ಅತ್ಯುತ್ತಮ ನಟನಿಗಾಗಿ BAFTA ಪ್ರಶಸ್ತಿಯನ್ನು ಗೆದ್ದರು ಮತ್ತು ಈ ಕಾರಣದಿಂದಾಗಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಿಸಲಾಯಿತು. ‘ಹ್ಯಾರಿ ಪಾಟರ್’ ಚಿತ್ರಗಳಲ್ಲಿ ಹ್ಯಾಗ್ರಿಡ್ ಪಾತ್ರದ ಮೂಲಕ ದಶಕಗಳವರೆಗೆ ಜನ ಇವರನ್ನ ನೆನಪಿಸಿಕೊಳ್ಳುತ್ತಾರೆ. ಹ್ಯಾರಿ ಪಾಟರ್ ಸರಣಿಯ ಮೂಲಕ ಪ್ರಪಂಚದಾದ್ಯಂತದ ಮಕ್ಕಳು ಮತ್ತು ವಯಸ್ಕರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.