Jackie : ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದ ‘ಜಾಕಿ’ಗೆ 12 ವರ್ಷ..!!
ಕನ್ನಡದ ರಾಜ ರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಜಾಕಿ.
2010ರಲ್ಲಿ ತೆರಕಂಡಿದ್ದ ಜಾಕಿ ಸಿನಿಮಾ ಸಿನಿಪ್ರಿಯರ ಮನ ಗೆದ್ದಿತ್ತು.
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಜಾಕಿ ಸಿನಿಮಾಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.
ಮ್ಯೂಸಿಕಲ್ ಆಗಿ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು.
ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯಕ್ಕೆ ಚಿತ್ರಪ್ರಿಯರು ಮೆಚ್ಚುಗೆ ನೀಡಿದ್ದಲ್ಲದೇ ಸಿನಿಮಾವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿಕೊಟ್ಟಿದ್ದರು.
ಇಂದಿಗೆ ಈ ಸಿನಿಮಾ ರಿಲೀಸ್ ಆಗಿ 12 ವರ್ಷಗಳು ಕಳೆದಿದ್ದು, ಅಪ್ಪು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಕೆಲವು ಸೀನ್ ಗಳನ್ನು ಹಂಚಿಕೊಳ್ಳುತ್ತಾ ಹಾಡುಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.