Kantara : ಕನ್ನಡದಲ್ಲಿ ಬಾಕ್ಸ್ ಆಫೀಸ್ ನಡುಗಿಸಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ದೀಗ ಹಿಂದಿಯಲ್ಲೂ ಪ್ರೇಕ್ಷಕರ ಹೃದಯ ಗೆದ್ದಿದೆ.. ಹಿಂದಿಯಲ್ಲೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.. ಇಂದು ತಮಿಳು , ತೆಲುಗಿನಲ್ಲಿ ಕಾಂತಾ ಸಿನಿಮಾ ಆಯಾ ಭಾಷೆಗಳಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿದೆ..
ಹಿಂದಿ ವರ್ಷನ್ ಸುಮಾರು 2500 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ.. ತೆಲುಗು ತಮಿಳಿನಲ್ಲೂ ನೂರಾರು ಥಿಯೇಟರ್ ಗಳಲ್ಲಿ ಸಿನಿಮಾದ ಅಬ್ಬರ ಶುರುವಾಗಿದೆ..
ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಕಲೆಕ್ಷನ್ ಸಮೀಪದಲ್ಲಿದ್ದು ನಿರೀಕ್ಷೆಗೂ ಮೀರಿದ ಸಕ್ಸಸ್ ಕಂಡಿದೆ ಸಿನಿಮಾ..