ಕಾಂತಾರ … ಕಾಂತಾರ…ಕಾಂತಾರ… ಸಿನಿಮಾರಂಗದಲ್ಲಿ ಕಾಂತಾರದ್ದೇ ಮಾತು..!! ಕಾಂತಾರದ್ದೇ ಕ್ರೇಜ್..!! ಕಾಂತಾರ ಮಾಡಿದ್ದೇ ದಾಖಲೆಗಳು ಎನ್ನುವಷ್ಟರ ಮಟ್ಟಿಗೆ ಕಾಂತಾರ ಜನಮನದಲ್ಲಿ ಆವರಿಸಿಬಿಟ್ಟಿದೆ..
ಯಾರು ನೋಡಿದ್ರೂ ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ 100 ಕೋಟಿ ಕಲೆಕ್ಷನ್ ಹಂತದಲ್ಲಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಅಂದ್ಹಾಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಮಂದಿರದಲ್ಲೂ ಕಾಂತಾರ ಹವಾ ಜೋರಾಗಿದೆ..
ಹೌದು..! ಹೈದರಾಬಾದ್ ನ ಗಚ್ಚಿಬೌಲಿಯಲ್ಲಿರುವ ಮಹೇಶ್ ಬಾಬು ಮಾಲೀಕತ್ವದ AMB ಸಿನಿಮಾಮಂದಿರದಲ್ಲಿ ಕಾಂತಾರದ ಎಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.. ಇಂದು ಸಿನಿಮಾ ತಮಿಳು ತೆಲುಗಿನಲ್ಲಿ ರಿಲೀಸ್ ಆಗಿದ್ದು , ಕಾಂತಾರರದ ಮೊದಲ ದಿನದ 6 ಪ್ರದರ್ಶನಗಳು ಸಹ ಸೋಲ್ಡ್ ಔಟ್ ಆಗಿವೆ.
ಈ ಚಿತ್ರಮಂದಿರದಲ್ಲಿ 350 ಹಾಗೂ 295 ರೂಪಾಯಿಗಳ ದುಬಾರಿ ಟಿಕೆಟ್ ದರವೇ ಇತ್ತು. ಆದರೂ ಸಹ ಕಾಂತಾರ ಚಿತ್ರದ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಬಳಿಕ ಮತ್ತೊಂದು ಕನ್ನಡದಿಂದ ತೆಲುಗಿಗೆ ಡಬ್ ಆದ ಚಿತ್ರದ ಟಿಕೆಟ್ ಗಳು ಈ ಚಿತ್ರಮಂದಿರದಲ್ಲಿ ಮೊದಲ ದಿನದ ಎಲ್ಲಾ ಪ್ರದರ್ಶನಗಳಲ್ಲಿಯೂ ಸೋಲ್ಡ್ ಔಟ್ ಆಗಿದೆ ಎನ್ನಲಾಗುತ್ತಿದೆ.