Vijay Antony : ಸೌತ್ ನ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯದಲ್ಲಿ ಬಿರುಕು..!! ಡಿವೋರ್ಸ್..??
ಹೌದು..! ಸಮಂತಾ – ನಾಗಚೈತನ್ಯ , ಧನುಷ್ – ಐಶ್ವರ್ಯಾ ನಂತರ ಇದೀಗ ಮತ್ತೊಬ್ಬ ನಟ ದಾಂಪತ್ಯಕ್ಕೆ ಇತಿಶ್ರೀ ಹಾಡಲು ಹೊರಟಿದ್ದಾರೆ ಎನ್ನಲಾಗಿದೆ..
ಕಾಲಿವುಡ್ ನ ಖ್ಯಾತ ನಟ ವಿಜಯ್ ಆಂಥೋನಿ ಹಾಗೂ ಪತ್ನಿ ಸಂಬಂಧದ ನಡುವೆ ಬಿರುಕು ಮೂಡಿದ್ದು ಈ ಜೋಡಿ ಡಿವೋರ್ಸ್ ನಿರ್ಧಾರ ಮಾಡಿರೋದಾಗಿ ಸುದ್ದಿ ಈಗ ಹರಿದಾಡುತ್ತಿದೆ..
ಇತ್ತೀಚೆಗಷ್ಟೇ ವಿಜಯ್ ಆಂತೋನಿ ಟ್ವೀಟ್ ಒಂದನ್ನ ಮಾಡಿದ್ದರು.. ಅದು ಕೂಡ ಮದುವೆಯ ಬಗ್ಗೆ.. ಇದೇ ಟ್ವೀಟ್ ಹೀಗೊಂದು ಅನುಮಾನ ಹುಟ್ಟುಹಾಕಿದೆ.. ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಅವರು ನಿಮ್ಮನ್ನು ಮುಗಿಸಿಬಿಡುತ್ತಾರೆ ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದರು..
ಇದರಿಂದಾಗಿಯೇ ವಿಜಯ್ ಹಾಗೂ ಪತ್ನಿ ಫಾತಿಮಾ ಡಿವೋರ್ಸ್ ಪಡೆಯುತ್ತಾರಾ ಎಂಬ ಗಾಸಿಪ್ ಸದ್ದು ಮಾಡ್ತಿದೆ…