BBK9 : ಬಿಗ್ ಬಾಸ್ ಜೊತೆಗೆ ಅನುಪಮಾ ಮ್ಯಾಚ್ ಫಿಕ್ಸಿಂಗ್..! ವಿನ್ನಾಗೋದು ಅವರೇ ಎಂದ ಗುರೂಜಿ ವಿರುದ್ಧ ಕೆಂಡಕಾರಿದ ಸುದೀಪ್..!!
BiggBoss Kannada 9 – ಸೀಸನ್ ನಲ್ಲಿಯೇ ಕಿಚ್ಚ ಸುದೀಪ್ ಅವರು ಮೊದಲ ಬಾರಿಗೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದು ಮೂರನೇ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಂಡುಬಂದಿದೆ..
ಆರ್ಯವರ್ಧನ್ ಗುರೂಜಿ ಅವರು ಅನುಪಮಾ ಗೌಡ ಬಿಗ್ ಬಾಸ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ.. ಅವರನ್ನೇ ಬಿಗ್ ಬಾಸ್ ಈ ಸೀಸನ್ ನಲ್ಲಿ ಗೆಲ್ಲಿಸುವುದು ಎಂದು ಬಿಟ್ಟಿದ್ದಾರೆ..
ಆರ್ಯವರ್ಧನ್ ಗುರೂಜಿ ಅವರ ಮಾತು ಕೇಳಿ ಖುದ್ದು ಅನುಪಮ ದಿಗ್ಭ್ರಾಂತರಾಗಿದ್ದು , ಮನೆ ಮಂದಿಯಲ್ಲಾ ಶಾಕ್ ಆಗಿದ್ರು. ಗುರೂಜಿ ಅವರ ಮಾತಿನಿಂದ ಕೆರಳಿದ ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..
ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಂದಿನಂತೆ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಆಗ biggboss ಮನೆಯಲ್ಲಿರುವ 16 ಮಂದಿಯ ಪೈಕಿ ಟಾಪ್ 2 ಯಾರು ಆಗ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್ ಗೂ ಅನುಪಮಾ ಅವರು ಒಳಗಡೆ ಬರಬೇಕೆಂಬ ಆಸೆ ಇತ್ತು ಎನ್ನುತ್ತಾರೆ..
ಆಗ ಆರ್ಯವರ್ಧನ್ ಗುರೂಜಿ ಅವರ ವಿರುದ್ಧ ಕಿಚ್ಚ ಸುದೀಪ್ ಅವರು ಅಸಮಾಧಾನಗೊಳ್ಳುತ್ತಾ ಹಾಗೆಲ್ಲ ಮಾತನಾಡಬೇಡಿ ಸರ್ ಎನ್ನುತ್ತಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಆರ್ಯವರ್ಧನ್ ಗುರೂಜಿ ಅವರು, ಬಂಗಾರದ ಟಾಸ್ಕ್ ನಲ್ಲಿ ಎಷ್ಟು ಬಂಗಾರ ಇದೆ ಅಂತಾ ಗೊತ್ತಿದ್ದರೂ ಅನುಪಮಾರನ್ನು ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ.. ಇದಕ್ಕೆ ಸಿಟ್ಟಿನಲ್ಲಿ ಪ್ರತಿಕ್ರಿಯಿಸುವ ಸುದೀಪ್, ಇತರೇ ಸ್ಪರ್ಧಿಗಳ ಬಳಿ ನಿಮಗೆ ಹಾಗೆ ಅನಿಸಿತಾ ಅಂತಾ ಕೇಳಿದ್ದಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಇಲ್ಲ ಅಂತಾ ಹೇಳಿದ್ದಾರೆ.
ಆಗ ಗುರೂಜಿ ಅವರಿಗೆ ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಆದರೆ ಆರ್ಯವರ್ಧನ್ ಗುರೂಜಿ ಮತ್ತೆ ಪ್ರತಿಕ್ರಯಿಸಿ, ಯೋಚನೆ ಮಾಡಿ ಹೇಳಬೇಕಲ್ಲ ಸರ್, ಹಾಗಾಗಿ ಹೇಳುತ್ತಿದ್ದೀನಿ ಎಂದು ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು.
ಇದು ಸುದೀಪ್ ಅವರನ್ನ ಮತ್ತಷ್ಟು ಕೆರಳಿಸಿದೆ.. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು..?? ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಇಲ್ಲಿರುವ ಯಾರಿಗೂ ಯೋಗ್ಯತೆ ಇಲ್ವಾ? ಮೋಸ ಮಾಡಿ ಗೆಲ್ತಾ ಇದ್ದಾರಾ? ಅಂತಾ ಏರು ಧ್ವನಿಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗ ನಾನು ಜನರಲ್ಲಾಗಿ ಹೇಳಿದ್ದು ಸರ್ ಎನ್ನುತ್ತಾರೆ ಆರ್ಯವರ್ಧನ್ ಗುರೂಜಿ.. ಇದಕ್ಕೆ ಸಿಟ್ಟಲ್ಲೇ ಉತ್ತರಿಸುವ ಸುದೀಪ್ ಅವರು ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟುದ್ದ ಮಾತನಾಡುತ್ತೀರಾ. ಈ ವೇದಿಕೆಯ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ವಾರ್ನ್ ಮಾಡಿದ್ದಾರೆ.. ಇದು ಭಾನುವಾರದ ಸಂಚಿಕೆಯಾಗಿದ್ದು , ಪ್ರೋಮೋ ರಿಲೀಸ್ ಮಾಡಲಾಗಿದೆ… 30 ಸೆಕೆಂಡ್ ಪ್ರೋಮೋ ನೋಡಿ ಇಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದಾರೆ ವೀಕ್ಷಕರು..