ಬಿಗ್ ಬಾಸ್ ಸೀಸನ್ 9 ಮನೆಯಲ್ಲಿ ರೂಪೇಶ್ ಸಾನ್ಯಾ ನಡುವಿನ ತ್ಮೀಯತೆ ಮಿತಿ ಮೀರಿದ್ದು , ಕಿಚ್ಚ ಸುದೀಪ್ ಸಾನ್ಯಾ ಹಾಗೂ ರೂಪೇಶ್ ಗೆ ಕ್ಲಾಸ್ ತೆಗೆದುಕೊಂಡಿದ್ದು , ಈ ಮನೆ ಅದಕ್ಕಲ್ಲ , ಲಿಮಿಟ್ಸ್ ಕ್ರಾಸ್ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದರು..
ಅಂದ್ಹಾಗೆ ರೂಪೇಶ್ , ಸಾನ್ಯಾ ಜೊತೆಗೆ ಆರ್ಯವರ್ಧನ್ ಗುರೂಜಿ ಅವರಿಗೆ ಉತ್ತಮ ಬಾಂಧವ್ಯವಿದೆ.. ಗುರೂಜಿಯನ್ನು ಅಪ್ಪಾಜಿ ಎಂದು ಕರೆಯುವ ರೂಪೇಶ್ ಶೆಟ್ಟಿ ಇದೀಗ ಸಾನ್ಯ ನಿಮ್ಮ ಸೊಸೆ ಎಂದು ಗುರೂಜಿಗೆ ಹೇಳಿಬಿಟ್ಟಿದ್ದಾರೆ.. ಅವರ ಮಾತು ಸದ್ಯ ದೊಡ್ಮನೆಯಲ್ಲಿ ಭಾರೀ ಹೈಲೇಟ್ ಆಗ್ತಿದೆ..
ಅವರಿಬ್ಬರೂ ಫ್ರೆಂಡ್ಸ್ ಗಿಂತ ಹೆಚ್ಚೇ ಅನ್ನೋ ಅನುಮಾನ ಅವರ ನಡವಳಿಕೆಯಿಂದ ಈಗಾಗಲೇ ಬಂದಾಗಿದೆ.. ಆದ್ರೂ ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಜಾರಿಕೊಳ್ತಿದ್ದರು..
ಇದೀಗ ಖುದ್ದು ರೂಪೇಶ್ ಗುರೂಜಿಗೆ ಸಾನ್ಯಾ ಸೊಸೆ ಎಂದು ಬಿಟ್ಟಿದ್ದಾರೆ. ಅಡುಗೆ ಮನೆಯಲ್ಲಿ ಗುರೂಜಿ, ಸಾನ್ಯ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಇದ್ದರು. ಇದ್ಯಾರೋ ಒಡೆದು ಹಾಕಿದ್ದಾರೆ ಎಂದು ಗುರೂಜಿ ಹೇಳಿದಾಗ, ನಿಮ್ಮ ಮಗನೇ ರೂಪೇಶ್ ಇನ್ಯಾರು ಎಂದು ಸಾನ್ಯ ಉತ್ತರಿಸಿದ್ದಾರೆ. ಆಗ, ಇದನ್ಯಾರು ಕ್ಲೀನ್ ಮಾಡಿದ್ರು ಗೊತ್ತಾ ಅಪ್ಪಾಜಿ ಕ್ಲೀನ್ ಮಾಡಿದ್ದು ನಿಮ್ಮ ಸೊಸೆ ಸಾನ್ಯ ಎಂದ್ದಾರೆ..
ರೂಪೇಶ್ ಶೆಟ್ಟಿ. ಬಳಿಕ ಏಯ್ ಸೊಸೆ ಅಂತೆ ಒಪ್ಪಿಕೊಂಡವ್ನೆ, ಸೊಸೆ ಅಂತ ಹೇಳಿದ ಎಂದು ಆರ್ಯವರ್ಧನ್ ಗುರೂಜಿ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಕೂಡ ಕಂಗ್ರ್ಯಾಅಟ್ಸ್ ಎನ್ನುತ್ತಾರೆ.
ನಾನು ಯಾವಾಗ ಅವನ ಹೆಂಡತಿ ಆಗ್ತೀನಿ ಅಂದೆ, ಯಾರು ಪರ್ಮಿಷನ್ ಕೊಟ್ಟಿದ್ದು ಎಂದು ಸಾನ್ಯ ಅಯ್ಯರ್ ಪ್ರಶ್ನಿಸುತ್ತಾರೆ. ಅದಕ್ಕೆ, ತಮಾಷೆಗೆ ಹೇಳಿದ್ದು ನಾನು. ಅವಳು ಜಸ್ಟ್ ಫ್ರೆಂಡ್ ಅಷ್ಟೇ ಎಂದು ರೂಪೇಶ್ ಶೆಟ್ಟಿ ತಮ್ಮ ಹೇಳಿಕೆಯಿಂದ ಮತ್ತೆ ಜಾರಿಕೊಳ್ತಾರೆ.