ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಸಿನಿಮಾ ರಿಲೀಸ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ..
ಯಾರು ನೋಡಿದ್ರೂ ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ 100 ಕೋಟಿ ಕಲೆಕ್ಷನ್ ಹಂತದಲ್ಲಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಅಂದ್ಹಾಗೆ ಸಿನಿಮಾವನ್ನ ಇದೀಗ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ವೀಕ್ಷಿಸಿದ್ದಾರೆ..
ಸೌತ್ ಇಂಡಸ್ಟ್ರಿಯ ಸ್ಟಾರ್ ನಟಿ , ಅನುಷ್ಕಾ ಸಿನಿಮಾ ವೀಕ್ಷಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಕಾಂತಾರ ಸಿನಿಮಾ ವೀಕ್ಷಿಸಿದೆ. ನನಗೆ ಈ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. ಕಾಂತಾರ ಇಡೀ ತಂಡ ಅದ್ಭುತವಾಗಿದೆ.
ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಥಿಯೇಟರ್‌ನಲ್ಲಿ ಈ ಚಿತ್ರವನ್ನು ನೋಡಿ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.