ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಸಿನಿಮಾ ರಿಲೀಸ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ..
ಯಾರು ನೋಡಿದ್ರೂ ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ 100 ಕೋಟಿ ಕಲೆಕ್ಷನ್ ಹಂತದಲ್ಲಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಅಂದ್ಹಾಗೆ ತೆಲುಗು ಹಿಂದಿ ತಮಿಳಿನಲ್ಲಿ ಈಗಾಗಲೇ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವ ಕಾಂತಾರ ಮಲಯಾಳಂನಲ್ಲಿ ಅಕ್ಟೋಬರ್ 20 ಕ್ಕೆ ರಿಲೀಸ್ ಆಗಲಿದೆ.. ಕರಾವಳಿ ಹಾಗೂ ಕೇರಳದಲ್ಲಿನ ಸಂಕ್ಕೃತಿಗಳ ನಡುವೆ ಕೊಂಚ ಸಾಮ್ಯತೆಯೂ ಇಒರುವ ಕಾರಣಕ್ಕೆ ಅಲ್ಲಿನ ಜನರಿಗೆ ಈ ಸಿನಿಮಾ ಬಹಳಷ್ಟು ಹತ್ತಿರವಾಗಲಿದೆ..
ಅಂದ್ಹಾಗೆ ಸ್ಟಾರ್ ಮಲಯಾಳಂ ನಟ ಪೃಥ್ವಿ ರಾಜ್ ಸುಕುಮಾರ್ ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದು , ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ..