ರಿಷಬ್ ಶೆಟ್ಟಿ ನಟಿಸಿರುವ ಸಿನಿಮಾ ಕಾಂತಾರ ಇಂಡಿಯನ್ ಬಾಕ್ಸಾಫಿಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ರಿಲೀಸ್ ಆದ ಎಲ್ಲ ಭಾಷೆಗಳಲ್ಲೂ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಇದೀಗ ತೆಲುಗು, ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಈ ಸಿನಿಮಾವನ್ನು ನೋಡಿದ ಟಾಲಿವುಡ್ ನ ಬಡಾ ಬಡಾ ಹೀರೋಗಳು ಫಿದಾ ಆಗಿದ್ದಾರೆ.
ಇಲ್ಲಿಯವರೆಗೂ ತಮಿಳು ನಟ ಧನುಷ್, ರಾನಾ ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಬಗ್ಗೆ ಹಾಡಿಹೊಗಳಿದ್ದಾರೆ.
ಇದೀಗ ಪಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೂಡ ಟ್ವಿಟ್ಟರ್ ನಲ್ಲಿ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ ಒಂದು ಅದ್ಭುತವಾದಿ ಸಿನಿಮಾ. ಇಲ್ಲಿಯವರೆಗೂ ನಾನು ಈ ಸಿನಿಮಾವನ್ನು ಎರಡು ಬಾರಿ ನೋಡಿದ್ದೇನೆ.
ಒಳ್ಳೆ ಕಾನ್ಸೆಪ್ಟ್ ನೊಂದಿಗೆ ಬೊಂಬಾಟ್ ಕ್ಲೈಮ್ಯಾಕ್ಸ್ ಹೊಂದಿರುವ ಸಿನಿಮಾವನ್ನು ಥಿಯೇಟರ್ ನಲ್ಲಿ ತಪ್ಪದೇ ನೋಡಿ ಎಂದು ಸಿನಿಮಾ ಪೋಸ್ಟರ್ ಅನ್ನು ಬರೆದುಕೊಂಡಿದ್ದಾರೆ.