ಸಧ್ಯದ ಮಟ್ಟಿಗೆ ಕನ್ನಡ ಮತ್ತು ಭಾರತೀಯ ಚಲನಚಿತ್ರ ರಂಗದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೇ ಕಾಂತಾರ. IMDb ನಲ್ಲಿ ಅತ್ಯುತ್ತಮ ರೇಟಿಂಗ್ ಪಡೆದ ಭಾರತೀಯ ಚಲನಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಚಿತ್ರ IMDb ನಲ್ಲಿ 9.4 ರೇಟಿಂಗ್ ಪಡೆದುಕೊಂಡಿದೆ.
ಈ ಹಿಂದೆ ಕೆಜಿಎಫ್ 2 ಹೆಸರಿನಲ್ಲಿದ್ದ ದಾಖಲೆ ಇದೀಗ ಕಾಂತಾರ ಪಾಲಾಗಿದೆ. ಕನ್ನಡದ ಚಿತ್ರದ ದಾಖಲೆಯನ್ನ ಕನ್ನಡ ಚಿತ್ರವನ್ನೇ ಮುರಿದಿದೆ.
ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಚಿತ್ರ ಸಖತ್ ಸದ್ದು ಮಾಡಿದೆ. 13 ದಿನಗಳಲ್ಲಿ ಚಿತ್ರ 90 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಕನ್ನಡದಲ್ಲೇ ಚಿತ್ರ 70 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ನಿನ್ನೆ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಚಿತ್ರ ಇಂದು ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಇದರೊಂದಿಗೆ ನಿರಂತರವಾಗಿ ಗಳಿಕೆಯ ಗ್ರಾಫ್ ಏರುತ್ತಲೇ ಇದೆ.
ಕೆಜಿಎಫ್ ಮತ್ತು ಚಾರ್ಲಿ ನಂತರ ಇದೀಗ ಕಾಂತಾರ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನ ವಿಸ್ತರಿಸಿದೆ. ಚಿತ್ರ ಸಿನಿ ಪ್ರೇಮಿಗಳಿಂದ ಸಾಕಷ್ಟು ಪ್ರೀತಿ ಪಡೆಯುತ್ತಿದೆ.