ಸಲಾರ್ ಗೆ ಖಡಕ್ ವಿಲ್ಲನ್ ಆಗಿ ಪೃಥ್ವಿ ಸುಕುಮಾರ್ ಎಂಟ್ರಿಕೊಟ್ಟಿದ್ದಾರೆ.. ಪೃಥ್ವಿರಾಜ್ ಸುಕುಮಾರ್ ಬರ್ತ್ ಡೇ ಪ್ರಯುಕ್ತ ಬೆಂಕಿ ಪೋಸ್ಟರ್ ಹಂಚಿಕೊಂಡಿದೆ ಹೊಂಬಾಳೆ ಫಿಲಮ್ಸ್..
ಪೃಥ್ವಿ ಲುಕ್ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದೆ… ವರ್ಧನರಾಜ ಮನ್ನಾರ್ ಆಗಿ ಕಾಣಿಸಿಕೊಂಡಿರುವ ಪೃಥ್ವಿ ಡೇರಿಂಗ್ ಲುಕ್ ನೋಡಿ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ..
ಸಲಾರ್ ನಲ್ಲಿ ಪೃಥ್ವಿರಾಜ್ ನಟನೆಯ ಬಗ್ಗೆ ವದಂತಿ ಇತ್ತಾದ್ರೂ ಯಾವುದೇ ಅಧಿಕೃತವಾಗಿ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ.. ಇನ್ನೂ ಹೊಂಬಾಳೆ ಫಿಲಮ್ಸ್ ಒಂದು ಸಂಪ್ರದಾಯವನ್ನ ಪಾಲಿಸುತ್ತಾ ಬಂದಿದೆ..
ಯಾವುದೇ ಅಪ್ಡೇಟ್ಸ್ಗಳನ್ನ ನೀಡುವುದಾದ್ರೂ ಒಂದೆರೆಡು ದಿನ ಮುಂಚೆಯೇ ಈ ಬಗ್ಗೆ ಒಂದು ಸುಳಿವು ಕೊಟ್ಟಿರುತ್ತೆ.. ಆದ್ರೆ ಯಾವುದೇ ಸುಳಿವು ಬಿಟ್ಟುಕೊಡದೇ ಧಿಡೀರ್ ಪೋಸ್ಟರ್ ರಿಲೀಸ್ ಮಾಡಿರುವ ಹೊಂಬಾಳೆ ಫಿಲಮ್ಸ್ ಪೃಥ್ವಿ ಬರ್ತ್ ಡೇ ಪ್ರಯುಕ್ತ ಅವರ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ..
ಪೃಥ್ವಿ ಫೈರೀ ಲುಕ್ ಗೆ ಅಭಿಮಾನಿಗಳ ಧಡ್ ಕನ್ ಹೆಚ್ಚಾಗಿದೆ.. ಕಾಮೆಂಟ್ ಗಳನ್ನ ಮಾಡುತ್ತಾ ಅಭಿಮಾನಿಗಳು ಪೃಥ್ವಿ ರಾಜ್ ಮತ್ತೆ ಸಿನಿಮಾತಂಡಕ್ಕೆ ಶುಭ ಕೋರುತ್ತಿದ್ದಾರೆ..
ಪೃಥ್ವಿಯನ್ನ ಅವತಾರದಲ್ಲಿ ಬಹುಶಃ ಹಿಂದೆಂದೂ ಅಭಿಮಾನಿಗಳು ನೋಡಿಲ್ಲ ಅಂತ ಕಾಣುತ್ತೆ.. ವಿಭಿನ್ನ ಆದ್ರೆ ಡೆಡ್ಲಿ ಅವತಾರದಲ್ಲಿ ಹಣೆಯಲ್ಲಿ ಕಪ್ಪು ತಿಲಕ ಕೊರಳು ಮೂಗು ಕಿವಿಗೆ ಆಭರಣ ಧರಿಸಿ ಡೆಡ್ಲಿಯಾಗಿ ಕಂಡಿದ್ದು ಸಲಾರ್ ನಲ್ಲಿ ಬಾಹುಬಲಿ ಪ್ರಭಾಸ್ ಹಾಗೂ ಪೃಥ್ವಿ ನಡುವಿನ ಮುಖಾಮುಖಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ..
ಹೊಂಬಾಳೆ ಬ್ಯಾನರ್ ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಐದು ಆಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಜಗಪತಿ ಬಾಬು, ಈಶ್ವರಿ ರಾವ್, ಅವರಂಥ ಘಟಾನುಘಟಿ ನಟರ ಜೊತೆಗೆ ಇದೀಗ ಪೃಥ್ವಿರಾಜ್ ಕೂಡ ಸೇರಿಕೊಂಡಿದ್ದಾರೆ.
ಅಂದ್ಹಾಗೆ ಹೊಂಬಾಳೆ ಫಿಲಮ್ಸ್ ಜೊತೆಗೆ ಸುಕುಮಾರ್ ಮತ್ತೊಂದು ಸಿನಿಮಾ ಅನೌನ್ಸ್ ಆಗಿದ್ದು ಈಗಾಗಲೇ ಪೋಸ್ಟರ್ ಕೂಡ ರಿಲೀಸ್ ಆಗಿದೆ.. ಟೈಸನ್ ಸಿನಿಮಾದ ಟೈಟಲ್ ಆಗಿದ್ದು ಪೃಥ್ವಿ ನಿರ್ದೇಶಿಸಿ ನಟಿಸಲಿದ್ದು , ಮೂಲ ಮಲಯಾಳಂ ಭಾಷೆಯಲ್ಲಿ ತಯಾರಾಗಿ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ..