ಹಿಂದಿ ಕಿರುತೆರೆಯ ಖ್ಯಾತ ನಟಿ ವೈಶಾಲಿ ಟಕ್ಕರ್ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.. ಇತ್ತಿಚೆಗೆ ಎಲ್ಲಾ ಭಾಷೆಯ ಕಿರುತೆರೆ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಆತ್ಮಹರತ್ಯಾ ಪ್ರಕರಣಗಳು ಬೆಳಕಿಗೆ ಬರುತ್ತಿದೆ..
ಇದೀಗ ಮತ್ತೊಬ್ಬ ಪ್ರತಿಭಾನ್ವಿತ ನಟಿ ಆತ್ಮಹತ್ಯೆ ಸಿನಿಮಾರಂಗದಲ್ಲಿ ಆಘಾತ ಮೂಡಿಸಿದೆ.. ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ವೈಶಾಲಿ ಮೃತದೇಹದ ಬಳಿ ಡೆತ್ ನೋಟ್ ಕೂಡ ಸಿಕ್ಕಿದ್ದು , ಡೆತ್ ನೋಟ್ ನಲ್ಲಿ ಪ್ರಿಯಕರನ ಸುಳಿವು ಸಿಕ್ಕಿದೆ ಎನ್ನಲಾಗ್ತಿದೆ..
2015 ರಲ್ಲಿ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯ ಮೂಲಕ ವೈಶಾಲಿ ನಟನೆಗೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ‘ರಕ್ಷಾಬಂಧನ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
‘ಸಸುರಾಲ್ ಸಿಮಾರ್ ಕಾ’ ಮತ್ತು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ದಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಸುಂದರ ನಟಿ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ 26 ವರ್ಷ.
ಇಂದೋರ್‌ನ ಸಹಾಯಕ ಪೊಲೀಸ್ ಕಮಿಷನರ್ ಎಂ ರೆಹಮಾನ್ ಅವರು ಡೆತ್ ನೋಟ ವಶಪಡಿಸಿಕೊಂಡಿದ್ದಾರೆ.. ನಟಿಯು ಒತ್ತಡಕ್ಕೆ ಒಳಗಾಗಿದ್ದರು.. ಮಾಜಿ ಪ್ರಿಯಕರನಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಡೆತ್ ನೋಟ್ ಸೂಚಿಸುತ್ತಿದೆ ಎನ್ನಲಾಗಿದೆ..
ಯುವ ನಟಿಯು ತನ್ನ ತಂದೆ ಮತ್ತು ಸಹೋದರನೊಂದಿಗೆ ಇಂದೋರ್ ನಲ್ಲಿ ಉಳಿದುಕೊಂಡಿದ್ದರು.
ಇಂದು ಬೆಳಗ್ಗೆ ವೈಶಾಲಿ ಟಕ್ಕರ್ ತನ್ನ ಕೊಠಡಿಯಿಂದ ಹೊರಗೆ ಬಾರದೆ ಇದ್ದಾಗ ಆಕೆಯ ತಂದೆ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಡೆತ್ ನೋಟ್ ವಶಪಡಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆಕೆಯ ಮೊಬೈಲ್ ಫೋನ್ ಕೂಡ ಸಂಗ್ರಹಿಸಲಾಗಿದ್ದು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.