BBK9
ಬಿಗ್ ಬಾಸ್ ಸೀಸನ್ ಒಂದರ ರನ್ನರ್ ಅಪ್ ಅರುಣ್ ಸಾಗರ್ BiggBoss Kannada 9 ಕ್ಕೂ ಎಂಟ್ರಿಕೊಟ್ಟಿದ್ದಾರೆ.. ಆದ್ರೆ ಅರುಣ್ ಸಾಗರ್ ಅವರು ಮಗುವಿನಂತ ಮನಸ್ಸಿನವರು.. ಆದ್ರೆ ಈ ಸೀಸನ್ ನಲ್ಲಿ ಜೋಕರ್ ರೀತಿ ಆಗುತ್ತಿದ್ದಾರೆ ಎನಿಸಿತ್ತು.. ಸುದೀಪ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ,..
ಆದ್ರೆ ಜೋಕರ್ ಎಂದು ಕರೆಸಿಕೊಂಡ ಅರುಣ್ ಸಾಗರ್ ಇದೀಗ ಮೂರನೇ ವಾರ ಕಿಚ್ಚನ ಚಪ್ಪಾಳೆಗೆ ಭಾಜನರಾಗಿದ್ದಾರೆ.. ಕಿಚ್ಚ ಸುದೀಪ್ ಅವರಿಂದ ಚಪ್ಪಾಳೆಯ ಮೆಚ್ಚುಗೆ ಪಡೆದಿದ್ದಾರೆ..
ಈ ವಾರ ಎಲ್ಲಾ ಟಾಸ್ಕ್ ಗಳಲ್ಲೂ ಉತ್ತಮವಾಗಿ ಆಡಿರುವ ಅರುಣ್ ಸಾಗರ್ ಮನರಂಜಿಸುವಾಗ ಮನರಂಜಿಸಿದ್ದಾರೆ.. ಎಲ್ಲಿ ಜೋಕರ್ ಆಗಬೇಕೋ ಆಗಿದ್ದಾರೆ.. ಇನ್ನಿತರೇ ಕಡೆ ಉತ್ತಮವಾಗಿ ಆಡಿದ್ದಾರೆ.. ಇದನ್ನ ಖುದ್ದು ಸುದೀಪ್ ಅವರೇ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಕಳೆದ ವಾರ ಅನುಪಮಾರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು.. ಈಗ ಅರುಣ್ ಸಾಗರ್ ಅವರು ಕಿಚ್ಚನ ಚಪ್ಪಾಳೆಯ ಗೌರವಕ್ಕೆ ಪಾತ್ರರಾಗಿದ್ದಾರೆ..
ಬಿಗ್ ಬಾಸ್ ಕನ್ನಡ ಸೀಸನ್ 9 ಮೂರು ವಾರಗಳನ್ನ ಮುಗಿಸಿ ನಾಲ್ಕನೇ ವಾರಕ್ಕೆ ತಲುಪಿದೆ.. ಉಳಿದಿರುವುದು 15 ಸ್ಪರ್ಧಿಗಳು.. ಈಗಾಗಲೇ ಐಶ್ವರ್ಯಾ , ಸೈಕ್ ನವಾಜ್ ಈ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರನಡೆದಿದ್ದು , ಇನ್ಮುಂದೆ ಆಟ , ಕಿತ್ತಾಟ , ಗಾಸಿಪ್ ಮನರಂಜನೆಗಳು , ಟ್ವಿಸ್ಟ್ ಗಳು ಎಲ್ಲದರ ಬಗ್ಗೆ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ..