Head Bush : ಭೂಗತಲೋಕದಲ್ಲಿ ಜಯರಾಜ್ ಬರೆದ ರಕ್ತಸಿಕ್ತ ಕಥೆ..!! ಡಾಲಿ ನಟನೆಗೆ ಉಘೇ ಎಂದ ಫ್ಯಾನ್ಸ್..!!!
ನಟ ರಾಕ್ಷಸ ಡಾಲಿ ಧನಂಜಯ್.. ಒನ್ಸ್ ಅಪಾನ್ ಅ ಟೈಮ್ ನಲ್ಲಿ ಭೂಗತಲೋಕದಲ್ಲಿ ನಡೆದಿದ್ದ ರಕ್ತಸಿಕ್ತ , ಪಾತಕ ಜಗತ್ತಿನ ಕಥೆಯಾಧಾರಿತ ಹೆಡ್ ಬುಷ್ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಡಾನ್ MP ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..
ಅಗ್ನಿ ಶ್ರೀಧರ್ ಕಥೆ ಚಿತ್ರಕಥೆ ಬರೆದಿದ್ದು, ಹೊಸ ನಿರ್ದೇಶಕ ಶೂನ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿ ಪಿಕ್ಷರ್ಸ್ ಮತ್ತು ಸೋಮಣ್ಣ ಟಾಕಿಸ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತಿ ಚಿತ್ರ ಹೆಡ್ ಬುಷ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಭೂಗತ ಲೋಕದ ಕಥೆಯನ್ನ ಹೇಳಲಿರುವ ಈ ಸಿನಿಮಾದಲ್ಲಿ ಡಾನ್ M P ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ರಿಲೀಸ್ ಆಗಿದ್ದು , ಡಾಲಿ ನಟನೆ ನೋಡಿ ಅವರನ್ನ ನಟ ರಾಕ್ಷಸನೇ ಅಂತಿದ್ದಾರೆ ನೆಟಿಜನ್ಸ್… ಡಾಲಿ ಜಯರಾಮನ ಪಾತ್ರಕ್ಕೆ ಪರ್ಫೆಕ್ಟ್ ಎನ್ನುತ್ತಿದ್ದಾರೆ.. ಡಾಲಿ ಹೀರೋ ಹಾಗೂ ವಿಲ್ಲನ್ ಎರೆಡೂ ಇಮೇಜ್ ನಲ್ಲೂ ಮಿಂಚು , ಆ ಪಾತ್ರಕ್ಕೆ ನ್ಯಾಯ ದಗಿಸುವ ಪ್ರತಿಭಾನ್ವಿತ ನಟ..
ಈ ಸಿನಿಮಾದಲ್ಲಿ ಒಂದ್ ರೀತಿ ಡಾಲಿ ವಿಲ್ಲನ್ ಹೀರೋ ಎಂದು ವರ್ಣಿಸಬಹುದು.. ಹಿನ್ನೆಲೆ ಸಂಗೀತಕ್ಕೂ ಇಲ್ಲಿ ಫುಲ್ ಮಾರ್ಕ್ಸ್ ಕೊಡಲೇ ಬೇಕು.. ಅದ್ರಲ್ಲೂ ಟ್ರೇಲರ್ ನಲ್ಲಿ ವೀರಗಾಸೆ , ಡುಳ್ಳು ಕುಣಿತದ ಜೊತೆಗೆ ಡಾಲಿ ರಣಘರ್ಜನೆ ಥ್ರಿಲ್ ಕೊಡುತ್ತೆ.. ಕೊತ್ವಾಲನಾಗಿ ವಶಿಷ್ಠ ಸಿಂಹ ಕೂಡ ಅಬ್ಬರಿಸಿದ್ದಾರೆ..
ಹೆಡ್ ಭುಷ್ ನಲ್ಲಿ ಭೂಗತ ಜನಗತ್ತಿ ಭೀಭತ್ಸತೆಯನ್ನ , ರಕ್ತಸಿಕ್ತ ಜನಗತ್ತಿನ ಅನಾವರಣ ಮಾಡಲಾಗಿದ್ದು , ಡಾಲಿ ಧನಂಜಯ್ ಬಹುನಿರೀಕ್ಷೆಯ ಸಿನಿಮಾ ಇದಾಗಿದೆ..
1970 ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನ ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ದಶಕಗಳ ಹಿಂದೆ ಬೆಂಗಳೂರಿನಲ್ಲಿ ಜಯರಾಜ್ ಮತ್ತವನ ಗ್ಯಾಂಗ್ ಹಾವಳಿ ಹೇಗಿತ್ತು ಎನ್ನುವುದರ ಸಣ್ಣ ಝಲಕ್ ಅನ್ನು ಟ್ರೈಲರ್ ನಲ್ಲಿ ಕೊಟ್ಟಿಕೊಟ್ಟಿದ್ದಾರೆ. ಕೆಂಪೇಗೌಡರು ಕಟ್ಟಿದ ನಗರದಲ್ಲಿ ರೌಡಿಸಂ ಹುಟ್ಟಿಕೊಂಡಿದ್ದು, ಜಯರಾಜ್ ನಂಬರ್ ವನ್ ಡಾನ್ ಆಗಿ ಬೆಳೆದಿದ್ದು ಹೀಗೆ ಸಾಗುತ್ತೆ. ಗಂಗಾ ಅಂಡ್ ಟೀಂ ಅವನಿಗೆ ಸಾಥ್ ಕೊಡುತ್ತಾ ಹೋಗಿದ್ದು, ಕೆಲ ರಾಜಕಾರಣಿಗಳು ಅವನನ್ನು ಬೆಳೆಸಿದ್ದು ಹೀಗೆ ಎಲ್ಲದರ ಇಣುಕು ನೋಟ ಎರಡೂವರೆ ನಿಮಿಷದ ಟ್ರೈಲರ್‌ನಲ್ಲಿದೆ.
ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಪುಸ್ತಕವನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಪವರ್ ಫುಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ತೆಲುಗಿನ RX 100 ಚಿತ್ರದ ಮೂಲಕ ಪರಿಚತವಾಗಿರುವ ನಟಿ ಪಾಯಲ್ ರಜಪೂತ್ ಹೆಡ್ ಬುಷ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಘಟಾನುಘಟಿ ನಟರೇ ಕಾಣಿಸಿಕೊಂಡಿದ್ದಾರೆ..
ಅಂದ್ಹಾಗೆ ಟ್ರೇಲರ್ ನಲ್ಲೇ ಹೇಳಿರುವಂತೆ ಇದಿನ್ನೂ ಮೊದಲ ಭಾಗವಷ್ಟೇ… ಸಿನಿಮಾದ 2 ನೇ ಭಾಗವೂ ಬರಲಿದೆ.. ಅಂದ್ಹಾಗೆ ಸಿನಿಮಾಗೆ ಸಾಕಷ್ಟು ವಿವಾದವೂ ವ್ಯಕ್ತವಾಗಿತ್ತು.. ಆದ್ರೂ ಎಲ್ಲ ಅಡಚಣೆಗಳನ್ನ ಮೀರಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು , ಟ್ರೇಲರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುವ ಲಕ್ಷಣ ಕಾಣುತ್ತಿದೆ.. ಟ್ರೇಲರ್ ರ್ಭರ್ಜರಿ ವೀವ್ಸ್ , ಕಾಮೆಂಟ್ಸ್ , ಲೈಕ್ಸ್ ಗಳನ್ನ ಪಡೆದು ಮುಂದೆ ಸಾಗುತ್ತಿದೆ..