Hombale Films ನಿರ್ಮಾಣದ ಸಿನಿಮಾದಲ್ಲಿ ‘ಮಹಾನಟಿ’..!! ನಾಯಕ ಯಾರು…?? ಸಿನಿಮಾ ಯಾವುದು..??
ಮಹಾನಟಿ , ರಾಷ್ಟ್ರ ಪ್ರಶಸ್ತಿ ವಿಜೇತರಾದ ಸೌತ್ ನ ಖ್ಯಾತ ನಟಿ ಕೀರ್ತಿ ಸುರೇಶ್ ಸದ್ಯ ಟಾಲಿವುಡ್ , ಕಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯುಸಿಯಿದ್ದು ಟಾಪ್ ನಟಿಯರ ಪೈಕಿ ಒಬ್ಬರಾಗಿದ್ದಾರೆ.. ಇಂದು ಕೀರ್ತಿ ಸುರೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ..
ಈ ಹಿನ್ನೆಲೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಗೆ ವಿಷ್ ಮಾಡಿರೋದು ಇದೀಗ ಹೊಸ ಕುತೂಹಲ ಕೆರಳಿಸಿದೆ.. ಹೊಂಬಾಳೆ ಫಿಲಮ್ಸ್ ಏನೇ ಅಪ್ ಡೇಟ್ ನೀಡೋಕು ಮುಂಚೆ ಒಂದು ಸುಳಿವು ಬಿಟ್ಟುಕೊಡುತ್ತೆ.. ಅಂತೆಯೇ ಇದೀಗ ಕೀರ್ತಿಗೆ ವಿಷ್ ಮಾಡುವ ಮೂಲಕ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಕೀರ್ತಿ ಕಾಣಿಸಿಕೊಳ್ಳುಚವ ಸುಳಿವು ನೀಡಿದ್ದಾರೆ..
ಆದ್ರೆ ಪ್ರಶ್ನೆ ಕೀರ್ತಿ ಯಾವ ಸಿನಿಮಾದಲ್ಲಿ , ಯಾವ ನಾಯಕನ ಜೊತೆಗೆ ನಟಿಸಲಿದ್ದಾರೆ ಎಂಬುದು.. ಇತ್ತೀಚೆಗೆ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಘೋಷಣೆ ಮಾಡಿದೆ.. ಫಹಾದ್ – ಪವನ್ ಕುಮಾರ್ ಕಾಂಬಿನೇಷನ್ ನ ಧೂಮಂ , ಪೃಥ್ವಿ ಸುಕುಮಾರ್ ಟೈಸನ್ ಅಥವ , ಸುಧಾ ಕೊಂಗರ ಅವರ ನಿರ್ದೇಶನದ ಸಿನಿಮಾಗಳು ಇವೆ.. ಈ ಸಿನಿಮಾಗಳ ಪೈಕಿ ಯಾವುದರಲ್ಲಿ ಮಹಾನಟಿ ನಟಿಸಬಹದು ಎಂಬೆಲ್ಲಾ ಚರ್ಚೆಗಳಾರಂಭಾವಗಿದೆ..
ಆದ್ರೆ ಮೂಲಗಳ ಪ್ರಕಾರ ಸುಧಾ ಕೊಂಗರ ಅವರ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಸಿಂಬು ನಾಯಕನಾಗಬಹುದು ಅವರಿಗೆ ಕೀರ್ತಿ ನಾಯಕಿಯಾಗಬಹದೆಂದೇ ಚರ್ಚೆಯಾಗ್ತಿದೆ.. ಆದ್ರೆ ಹೊಂಬಾಳೆ ಫಿಲಮ್ಸ್ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್ ಡೇಟ್ಸ್ ನೀಡುವ ಸಾಧ್ಯತೆ ಇದೆ..
ಇದನ್ನೂ ಓದಿ: https://cinibazaar.com/2022/10/17/kantara-shilpa-shetty-cinibazaar