ಕಾಂತಾರ..!! ಕಾಂತಾರ..!! ಎಲ್ಲಿ ನೋಡಿದ್ರೂ ಕಾಂತಾರದ್ದೇ ಹವಾ..!! ರಿಷಬ್ ಶೆಟ್ಟಿ ನಟನೆಯದ್ದೇ ಮಾತು..
ಅಂದ್ಹಾಗೆ ರಿಷಬ್ ಶೆಟ್ಟಿ ವಿವೋ ಪ್ರೋ ಕಬಡ್ಡಿ ಸೀಸನ್ 9 ರ ನಿನ್ನೆಯ ( ಅಕ್ಟೋಬರ್ 16 ) ರ ಸಂಜೆ 7.30 ಕ್ಕೆ ಮೊದಲ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು.. ಈ ವೇಳೆ ಕಂಠೀರವ ಸ್ಟೇಡಿಯಮ್ ನಲ್ಲೂ ಕಾಂತಾರಮಯವಾಗಿದ್ದು ಕಂಡುಬಂತು,..
ಹೌದು..! ರಿಷಬ್ ರಾಷ್ಟ್ರಗೀತೆ ಹಾಡಿ ಕಬಡ್ಡಿಗೆ ಚಾಲನೆ ನೀಡಿದರು.. ಅದ್ರಲ್ಲೂ ವಿಶೇಷ ಅಂದ್ರೆ ಪಂಚೆ ಧರಿಸಿಯೇ ರಿಷಬ್ ಸ್ಟೇಡಿಯಮ್ ಆಗಮಿಸಿದ್ದು ಎಲ್ಲರ ಗಮನ ಸೆಳೆದು ಮೆಚ್ಚುಗೆಯನ್ನೂ ಪಡೆಯಿತು.. ಈ ವೇಳೆ ಅಭಿಮಾನಿಗಳು ಕಾಂತಾರ , ರಿಷಬ್ ಶೆಟ್ಟಿ ಎಂದು ಕಿರುಚಿದ್ದಾರೆ..
ರಿಷಬ್ ಶೆಟ್ಟಿ ಬೆಂಗಳೂರು ಗೂಳಿಗಳಿಗೆ ಬೆಂಬಲಿಸಿದ್ದರು.. ಬೆಂಗಳೂರು ತಂಡ ಈ ಪಂದ್ಯದಲ್ಲಿ ಯೋಧಸ್ ವಿರುದ್ಧ ಸೋಲನುಭವಿಸಿತ್ತು.. ಈ ಮೂಲಕ ಬುಲ್ಸ್ ಗೆ ಸತತ 2 ನೇ ಸೋಲು ಇದಾಗಿತ್ತು..