Kantara ಅಬ್ಬರ ನಿಲ್ಲೋ ಮಾತೇ ಇಲ್ಲ..!!! ಬಾಕ್ಸ್ ಆಫೀಸ್ ನಲ್ಲಿ ರಿಷಬ್ ಕಾಂತಾರದ್ದೇ ಆರ್ಭಟ..!!
ಕಾಂತಾರ ಒಂದು ಸಿನಿಮಾವಲ್ಲ ಎಮೋಷನ್..!! ಕರಾವಳಿ ಸಂಸ್ಕೃತಿಯ ಅನಾವರಣ..!! ಸಿನಿಮಾ ಥ್ರಿಲ್ ಕೊಡುತ್ತೆ , ಭಕ್ತಿಯಿಂದ ಕೈಮುಗಿಯುವಂತೆಯೂ ಮಾಡುತ್ತೆ.. ನಗಿಸುತ್ತೆ , ಅಳಿಸುತ್ತೆ , ಭಯ ಬೀಳಿಸುತ್ತೆ..
ಅಂದ್ಹಾಗೆ ಸಿನಿಮಾಗೆ ಕನ್ನಡಿಗರು ಹೃದಯಲ್ಲಿ ಜಾಗ ಕೊಟ್ಟರು.. ಪರ ಭಾಷಿಗರು ಮನಸ್ಸಿನಿಂದ ಒಪ್ಪಿ ಹಾಡಿ ಹೊಗಳುತ್ತಿದ್ದಾರೆ..
ಸಿನಿಮಾಗೆ ತಾರೆಯರೂ ಫಿದಾ ಆಗಿದ್ದಾರೆ..
ಅಂದ್ಹಾಗೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಈಗ ಹೊಸ ದಾಖಲೆ ಬರೆದಿದೆ..
ಹೌದು..! ಬಿಡುಗಡೆಯಾದ 16ನೇ ದಿನಕ್ಕೆ ( ಶನಿವಾರ ಒಂದೇ ದಿನ ) ಸಿನಿಮಾ ಎಲ್ಲಾ ಭಾಷೆಗಳಿಂದ ಒಟ್ಟಾರೆ 15 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ..
ಹೊಂಬಾಳೆ ಸಂಸ್ಥೆ ನಿರ್ಮಿಸಿ , ರಿಷಬ್ ಶೆಟ್ಟಿ ನಿರ್ದೇಶಿಸಿ , ನಟಿಸಿರುವ ಕಾಂತಾರ ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14, 15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು.
ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂಪಾಯಿ ಸಂಗ್ರಹಿಸಿದೆ.
ಶನಿವಾರ ಒಂದೇ ದಿನ ಸಿನಿಮಾ ಕನ್ನಡ , ತೆಲುಗು ಮತ್ತು ತಮಿಳು ಅವತರಣಿಕೆಯಿಂದ 15 ಕೋಟಿ ರೂಪಾಯಿ ಗಳಿಸಿದೆ.. ಈ ಮೂಲಕ ಹೊಸ ದಾಖಲೆ ಬರೆದಿದೆ..