‘Kantara’ ನೋಡಿ ಇದೇನ್ ಸಿನಿಮಾ ಎಂದ ಶಿಲ್ಪಾ ಶೆಟ್ಟಿ..!!
ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಕನ್ನಡ ಇಂಡಸ್ಟ್ರಿಯಿಂದ ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ.. KGF , ಚಾರ್ಲಿ , ವಿಕ್ರಾಂತ್ ರೋಣ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ ನಂತರ ಕಾಂತಾರ ಈಗ ಬಾಕ್ಸ್ ಆಫೀಸ್ ನಡುಗಿಸುತ್ತಿದೆ..
ಕಾಂತಾರ… ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ..!! ಕಾಂತಾರದ್ದೇ ಸದ್ದು.. ಸಿನಿಮಾ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ.. ಕಾಂತಾರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕಾಂತಾರ ಹೈಪ್ ನೋಡಿ ಇತರೇ ಭಾಷೆಗಳಿಗೂ ಸಿನಿಮಾ ರಿಲೀಸ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ..
ಯಾರು ನೋಡಿದ್ರೂ ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ 100 ಕೋಟಿ ಕಲೆಕ್ಷನ್ ಹಂತದಲ್ಲಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಇತ್ತೀಚೆಗೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾವನ್ನ ಕೊಂಡಾಡಿದ್ದರು.. ಇದೀಗ ಬಾಲಿವುಡ್ ನಟಿ , ಮೂಲತಃ ಕರ್ನಾಟಕದ ಕರಾವಳಿ ಚೆಲುವೆ ಶಿಲ್ಪಾ ಶೆಟ್ಟಿ ಸಿನಿಮಾವನ್ನ ವೀಕ್ಷಿಸಿ ಬಾಯ್ತುಂಬ ಹೊಗಳಿದ್ದಾರೆ..
ಕಾಂತಾರ ನೋಡಿ ಶಿಲ್ಪಾ ಶೆಟ್ಟಿ ಹೇಳಿದ್ದೇನು..??
ಕಾಂತಾರ ಚಿತ್ರವನ್ನು ಇದೀಗ ಚಿತ್ರಮಂದಿರದಲ್ಲಿ ನೋಡಿದೆ. ನರೇಟಿವ್ ಅದ್ಭುತವಾಗಿದೆ. ಕ್ಲೈಮ್ಯಾಕ್ಸ್ ನೋಡಿದ ನಂತರ ಗೂಸ್ ಬಂಪ್ಸ್ ಬಂತು. ಈ ಸಿನಿಮಾ ಪ್ರೇಕ್ಷಕರನ್ನು ಬೇರೆ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ನಾನು ಮೂಲತಃ ಅದೇ ನಾಡಿನವಳು ಆಗಿದ್ದರಿಂದ, ವಾಪಸ್ಸು ನನ್ನ ತಾಯಿ ನೆಲಕ್ಕೆ ನನ್ನನ್ನು ಸಿನಿಮಾ ಕರೆದುಕೊಂಡು ಹೋಯಿತು ಎಂದು ಬರೆದುಕೊಂಡಿದ್ದಾರೆ.