Nayanatara – Vighnesh ಬಾಡಿಗೆ ತಾಯ್ತನದ ಪ್ರಕರಣದಲ್ಲಿ ಹೊಸ ಟ್ವಿಸ್ಟ್..!! 6 ವರ್ಷಗಳ ಹಿಂದೆಯೇ ಮದುವೆ..!!!
ನಯನತಾರಾ – ವಿಘ್ನೇಶ್ ಮದುವೆಯಾಗಿ 5 ತಿಂಗಳಿಗೆ ತಾವು ಅವಳಿ ಜವಳಿ ಮಕ್ಕಳಿಗೆ ತಂದೆಯಾಯಿಯಾಗಿದ್ದಾಗಿ ಹೇಳಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.. ಸೆರೋಗೆಸಿ ಮೂಲಕ ಮಕ್ಕಳನ್ನ ಪಡೆದು ಟ್ರೋಲ್ ಗೆ ಗುರಿಯಾಗೋದ್ರ ಜೊತೆಗೆ ಕಾನೂನಿ ಸಂಕಷ್ಟಕ್ಕೂ ಗುರಿಯಾಗಿದ್ದಾರೆ.. ಸೆರೊಗೆಸಿ ಮೂಲಕ ಮಕ್ಕಳನ್ನ ಪಡೆಯಲು ನಿಯಮಾವಳಿಗಳಿದ್ದು ಇದನ್ನ ಸರಿಯಾಗಿ ಪಾಲಿಸಿಲ್ಲ ಎನ್ನಲಾಗಿತ್ತು.. ಹೀಗಾಗಿಯೇ ತಮಿಳುನಾಡಿನ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು..
ಆದ್ರೆ ಈಗ ಪ್ರಕರಣದಲ್ಲಿ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.
ಹೌದು..! ಕಾನೂನು ರೀತಿಯಲ್ಲೇ ಮಕ್ಕಳನ್ನ ಪಡೆದಿದ್ದಾರೆ ಎಂದು ದಾಖಲೆಗಳನ್ನ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ.. ಇಬ್ಬರೂ 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎಂಬುದಕ್ಕೆ ಅವರು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಬಹಿರಂಗಗೊಂಡಿದೆ.
ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿದಂತೆ ಈ ಜೋಡಿ 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಆಗಿರುವುದು ತಿಳಿದು ಬಂದಿದೆ.. ಅಂದ್ಹಾಗೆ ಕಳೆದ ಜೂನ್ 9 ರಂದು ನಯನತಾರ ಮತ್ತು ವಿಘ್ನೇಶ್ ಶಿವನ್ ಸಂಪ್ರದಾಯಬದ್ಧವಾಗಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಗೆ ಶಾರುಕ್ ರಜನಿಕಾಂತ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರೇ ಸಾಕ್ಷಿಯಾಗಿದ್ದರು…