ಸಲಾರ್ ನಲ್ಲಿ ಪ್ರಭಾಸ್ ಎದುರು ಖಡಕ್ ವಿಲ್ಲನ್ ಆಗಿ ಪೃಥ್ವಿರಾಜ್ ಅವರನ್ನ ಹೊಂಬಾಳೆ ಫಿಲಮ್ಸ್ ಪರಿಚಿಯಿಸಿದ್ದು ಹೊಂಬಾಳೆ ಫಿಲಮ್ಸ್ ಬೆಂಕಿ ಹಂಚಿಕೊಂಡಿದೆ..
ಡಾರ್ಲಿಂಗ್ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಸಲಾರ್ ಚಿತ್ರ ತನ್ನ ಪಾತ್ರದಾರಿಗಳ ಮೂಲಕವೇ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟಿಸಲು ಘಟಾನುಘಟಿ ನಟರು ಕೈ ಜೋಡಿಸುತ್ತಿದ್ದಾರೆ. ನಿನ್ನೆ ದಿನ ಮಲಯಾಳಂ ಸೂಪರ್ ಸ್ಟಾರ್ ಫೃಥ್ವಿರಾಜ್ ಸುಕುಮಾರನ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕುರಿತು ಕುತೂಹಲ ಹೆಚ್ಚಿಸಿತ್ತು.
ಪೃಥ್ವಿರಾಜ್ ಈ ಚಿತ್ರದಲ್ಲಿ ವರ್ಧರಾಜ ಮನ್ನಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಪೃಥ್ವಿರಾಜ್ ಹಾಲಿವುಡ್ ಮ್ಯಾಗಜಿನ್‌ಗೆ ಸಂದರ್ಶನ ನೀಡಿದ್ದರು. ಸಲಾರ್ ಚಿತ್ರ ಒಪ್ಪಿಕೊಳ್ಳುವುದಕ್ಕೆ ಕಾರಣಗಳನ್ನ ವಿವರಿಸಿದರು.
‘ಕೆಜಿಫ್-2’ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಕೆಲವು ದಿನಗಳ ಚಿತ್ರೀಕರಣದ ನಂತರ ಈ ಚಿತ್ರ ಅದ್ಭುತ ಎನಿಸಿತು. ಒಬ್ಬ ನಟ ಹಾಗೂ ಸಿನಿಮಾ ಅಭಿಮಾನಿಯಾಗಿ ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಪೃಥ್ವಿರಾಜ್ ಸುಕುಮಾರನ್ ಹೇಳಿದ್ದಾರೆ.
ಸಲಾರ್ ಮುಂದಿನ ವರ್ಷ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಸಾಹೋ’ ಚಿತ್ರದ ನಂತರ ಆ್ಯಕ್ಷನ್ ಸಿನಿಮಾಗಳಿಂದ ದೂರ ಉಳಿದಿರುವ ಪ್ರಭಾಸ್ ಮತ್ತೆ ಆಕ್ಷನ್ ಚಿತ್ರಗಳತ್ತ ಮುಖ ಮಾಡಿದ್ದಾರೆ.