ತಮಿಳುನಾಡಿನಲ್ಲಿ 200 ಕೋಟಿ ರೂಪಾಯಿ ದಾಟಿದ ಮೊದಲ ಕಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..
ಮಣಿರತ್ನಂ ಅವರ ನಿರ್ದೇಶನದ ಸಿನಿಮಾ ತಮಿಳುನಾಡಿನ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂಪಾಯಿ ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ವಾಸ್ತವವಾಗಿ, ಈ ಚಿತ್ರವು ರಾಜ್ಯದಲ್ಲಿ 200 ಕೋಟಿ ಗಡಿ ದಾಟಿದ ಮೊದಲ ಕಾಲಿವುಡ್ ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್: 1 ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳೆರಡರ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಛಿದ್ರಗೊಳಿಸಿದೆ.
ವಿಕ್ರಮ್ , ಕಾರ್ತಿ , ಐಶ್ವರ್ಯಾ ರೈ , ತ್ರಿಶಾ , ಜಯಮ್ ರವಿ , ಶೋಭಿತಾ ಅಭಿನಯದ ಚಿತ್ರ ತಮಿಳುನಾಡಿನಲ್ಲಿ 200 ಕೋಟಿ ರುಪಾಯಿ ದಾಟುವ ಮೂಲಕ ಇದೀಗ ಮತ್ತೊಂದು ಸಾಧನೆ ಮಾಡಿದೆ.