Rashmika Mandanna : ಲೆಜೆಂಡ್ ಬಾಲಯ್ಯ ಅವರ ಕ್ರಶ್ ರಶ್ಮಿಕಾ ಮಂದಣ್ಣ ಅಂತೆ…!!
ಟಾಲಿವುಡ್ ನ ಸ್ಟಾರ್ ನಟರಾದ ಬಾಲಯ್ಯ ಅವರು ಟಾಕ್ ಶೋನ ಕೂಡ ನಿರೂಪಣೆ ಮಾಡ್ತಿದ್ದಾರೆ.. ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಫೇಮಸ್ ಆಗಿ ಟಾಲಿವುಡ್ ಹಾಗೂ ಇತರೇ ಭಾಷೆಗಳಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಕ್ರಶ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ..
ಹೌದು..! ನಂದಮುರಿ ಬಾಲಕೃಷ್ಣ ಅವರು ಅಖಂಡ ಸಿನಿಮಾದ ಸೂಕರ್ ಸಕ್ಸಸ್ ನ ನಂತರ ಅನ್‌ಸ್ಟಾಪಬಲ್ 2 ಚಾಟ್ ಶೋನ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ..
ಈ ಟಾಕ್ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.. ಈ ಶೋನ ಮೊದಲ ಸಂಚಿಕೆಯ ಅತಿಥಿಯಾಗಿ ನಟ ವಿಶ್ವಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ.
ಇದೇ ಶೋನಲ್ಲಿ ಬಾಲಯ್ಯ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಆಕೆ ತನ್ನ ಕ್ರಶ್ ಎಂದು ರಿವೀಲ್ ಮಾಡಿದ್ದಾರೆ. ಈ ಶೋನಲ್ಲಿ ನಟ ಬಾಲಯ್ಯಗೆ ವಿಶ್ವಕ್ ಮತ್ತು ಸಿದ್ಧು ಬಾಲಯ್ಯ ಅವರಿಗೆ ನಿಮ್ಮ ಕ್ರಶ್ ಯಾರೆಂದು ಕೇಳಿದರು. ಇದಕ್ಕೆ ಉತ್ತರಿಸಿದ ಬಾಲಯ್ಯ ರಶ್ಮಿಕಾ ಮಂದಣ್ಣ ಎಂದು ಹೇಳಿದರು.